ವಿಮಾನ ಸ್ಫೋಟ: ಹಾಲಿವುಡ್ ಖ್ಯಾತ ನಟ ಜೋಯ್ ಲಾರಾ ಸೇರಿ 7 ಜನರ ಸಾವು

281

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬ್ಯುಸಿನೆಸ್ ವಿಮಾನವೊಂದು ಸ್ಫೋಟಗೊಂಡ ಪರಿಣಿಮಾ ಹಾಲಿವುಡ್ ನಟ ಜೋಯ್ ಲಾರಾ, ಅವರ ಪತ್ನಿ ಸೇರಿದಂತೆ 7 ಜನರು ಸಾವನ್ನಪ್ಪಿದ್ದಾರೆ. ಅಮೆರಿಕಾದ ನ್ಯಾಶ್ವಿಲ್ಲೆ ನಗರದ ಪ್ರಿಸ್ಟ್ ಸರೋವರದಲ್ಲಿ ಈ ದುರ್ಘಟನೆ ನಡೆದಿದೆ.

ತಾಂತ್ರಿಕ ದೋಷದಿಂದಾಗಿ ವಿಮಾನ ಶನಿವಾರ ಸ್ಫೋಟಗೊಂಡಿದೆ. ಆರ್ ಸಿಎಫ್ ಆರ್ ಪಡೆ ಜೋಯ್ ಲಾರಾ ಸೇರಿದಂತೆ 7 ಜನರಿಗಾಗಿ ಶೋಧ ನಡೆಸಿದ್ರು. ಸರೋವರದಲ್ಲಿ ವಿಮಾನದ ಅವಶೇಷಗಳು ಸಿಕ್ಕಿವೆ. ಅವರ್ಯಾರು ಪತ್ತೆಯಾಗಿಲ್ಲ. ಹೀಗಾಗಿ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಕಮಾಂಡರ್ ಕ್ಯಾಪ್ಟನ್ ಶ್ಯಾಂಬ್ಲಿನ್ ತಿಳಿಸಿದ್ದಾರೆ.

ನಟ ಜೋಯ್ ಲಾರಾ ಟಾರ್ಜನ್ ಚಿತ್ರದ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ್ರು. ಸನ್ ಸೆಟ್ ಹೀಟ್, ಸಮ್ಮರ್ 67, ನೈಟ್ ವಾರ್, ಡೆತ್ ಗೇಮ್ ಸೇರಿದಂತೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಟ ಜೋಸೆಪ್ ಲಾರಾ ನಿಧನಕ್ಕೆ ಹಾಲಿವುಡ್ ಮಂದಿ, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!