ಭಾರತ-ಆಸ್ಟ್ರೇಲಿಯಾ ಟೆಸ್ಟ್: ಟಾಸ್ ಹಾರಿಸಲಿದ್ದಾರೆ ಪ್ರಧಾನಿ

108

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಅಹಮದಾಬಾದ್: ಗುರುವಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಬಾರ್ಡರ್ ಗವಾಸ್ಕರ್ ಟ್ರೋಫಿಯ 4ನೇ ಟೆಸ್ಟ್ ಪಂದ್ಯ ಇಲ್ಲಿನ ಸರ್ದಾರ್ ವಲ್ಲಾಭಾಯ್ ಪಟೇಲ್ ಮೈದಾನದಲ್ಲಿ ನಡೆಯಲಿದೆ. ಇದು ಹಲವು ವಿಶೇಷಗಳಿಗೆ ಸಾಕ್ಷಿಯಾಗಲಿದೆ. ಅದೇನು ಅಂದರೆ ಪ್ರಧಾನಿ ಮೋದಿ ಈ ಪಂದ್ಯದ ಆರಂಭಕ್ಕೂ ಮೊದಲು ನಡೆಯುವ ಟಾಸ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಟಾಸ್ ಹಾರಿಸಲಿದ್ದಾರಂತೆ.

ಮುಂಜಾನೆ 9.30ಕ್ಕೆ ಪಂದ್ಯ ಶುರುವಾಗಲಿದೆ. ಅದಕ್ಕೂ ಮೊದಲು 9 ಗಂಟೆಗೆ ನಡೆಯುವ ಟಾಸ್ ನಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಇದೆ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲಬೆನ್ಸಸ್ ಸಹ ಸಾಥ್ ನೀಡಲಿದ್ದಾರೆ. ಭಾರತ 2-1ನಿಂದ ಸರಣಿಯಲ್ಲಿ ಮುಂದಿದೆ. ಈ ಪಂದ್ಯ ಗೆದ್ದರೆ ಟೀಂ ಇಂಡಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲ್ಲಲಿದೆ.




Leave a Reply

Your email address will not be published. Required fields are marked *

error: Content is protected !!