ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ

134

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬೆಂಗಳೂರು ನಿರ್ಮಾತೃ ಕೆಂಪೇಗೌಡರ 108 ಅಡಿ ಎತ್ತರ ಕಂಚಿನ ಪ್ರತಿಮೆಯನ್ನು ಶುಕ್ರವಾರ ಪ್ರಧಾನಿ ಮೋದಿ ಅನಾವರಣಗೊಳಿಸಿದರು. ಹೀಗೆ ಹಲವು ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಪ್ರಧಾನಿ ಮೋದಿ, ಇದು ನನ್ನ ಸೌಭಾಗ್ಯ. ಇವತ್ತು ಕರ್ನಾಟಕ ಮಾತ್ರವಲ್ಲ, ದೇಶದ ಮಹಾನ್ ಚೇತನರ ಜಯಂತಿಯಾಗಿದೆ. ಕನಕದಾಸರು ನಮ್ಮ ಸಮಾಜಕ್ಕೆ ಮಹಾನ್ ಮಾರ್ಗದರ್ಶಕರಾಗಿದ್ದಾರೆ. ವೀರ ವನಿತೆ ಓನಿಕೆ ಓಬವ್ವ ನಮ್ಮ ಸಂಸ್ಕೃತಿ, ರಕ್ಷಣೆಗಾಗಿ ಜೀವ ಕೊಟ್ಟಿದ್ದಾರೆ ಎಂದರು.

ಭಾರತ ನಿರ್ಮಾಣದ ವಂದೇ ಭಾರತ ರೈಲು ಶುರುವಾಗಿದೆ. ಚನ್ನೈ, ಬೆಂಗಳೂರೂ, ಮೈಸೂರು ಸಂಚರಿಸಲಿದೆ. ಭಾರತ ಗೌರವ ದರ್ಶನ ರೈಲು ಶುರುವಾಗಿದೆ. ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ, ನಮ್ಮ ಭವಿಷ್ಯದ ಪ್ರೇರಣೆಯಾಗಿದೆ ಅಂತಾ ಹೇಳಿದರು.

ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ,  ಆದಿಚುಂನಗಿರಿಯ ನಿರ್ಮಿಲಾನಂದ ಸ್ವಾಮೀಜಿ, ರಾಜ್ಯ ಸಚಿವರಾದ ಅಶ್ವತ್ಥನಾರಾಯಾಣ, ಡಾ.ಕೆ ಸುಧಾಕರ್, ಭೈರತಿ ಬಸವರಾಜ್, ಮುನಿರತ್ನ, ಎಂಟಿಬಿ ನಾಗರಾಜ್, ಗೋಪಾಲಸ್ವಾಮಿ ಸೇರಿ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!