22 ಅಡಿ ಎತ್ತರದ ನೇತಾಜಿ ಪ್ರತಿಮೆ ಉದ್ಘಾಟಿಸಿದ ಪ್ರಧಾನಿ

242

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಗುರುವಾರ ಸಂಜೆ ಪ್ರಧಾನಿ ಮೋದಿ ಇಂಡಿಯಾ ಗೇಟ್ ಹತ್ತಿರ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 22 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು. ಇದೇ ವೇಳೆ ರಾಜ್ ಪಥ್ ರಸ್ತೆಗೆ ಕರ್ತವ್ಯ ಪಥ್ ಎಂದು ಮರುನಾಮಕರಣ ಮಾಡಲಾಗಿದ್ದು, ಅದನ್ನು ಸಹ ಉದ್ಘಾಟಿಸಿದರು.

13,450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಂಸತ್ ಭವನದ ವೆಚ್ಚದಲ್ಲಿಯೇ ನೇತಾಜಿ ಅವರ ಪ್ರತಿಮೆಯೂ ಒಳಗೊಂಡಿದೆ. ಈ ವೇಳೆ ನೇತಾಜಿ ಅವರ ಜೀವನ ಸಾಧನೆ ಕುರಿತು ತಿಳಿಸಲಾಗಿದೆ. 1,500 ಅತಿಥಿಗಳು ಈ ವೇಳೆ ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!