ಹಿರಿಯ ಕವಿ ಕೆ.ವಿ ತಿರುಮಲೇಶ ನಿಧನ

169

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಹೈದ್ರಾಬಾದ್: ಹಿರಿಯ ಕವಿ, ಭಾಷಾವಿಜ್ಞಾನಿ ಕೆ.ವಿ ತಿರುಮಲೇಶ್(83) ಅವರು ಸೋಮವಾರ ನಿಧನರಾಗಿದ್ದಾರೆ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಜನವರಿ 31ರಂದು ನಿಧನರಾಗಿದ್ದಾರೆ. ಇವರ ನಿಧನಕ್ಕೆ ಕನ್ನಡ ಸಾಹಿತ್ಯ ಲೋಕದ ಹಿರಿಯ, ಕಿರಿಯರೆಲ್ಲರೂ ಸಂತಾಪ ಸೂಚಿಸಿದ್ದಾರೆ.

ಕೇರಳದಲ್ಲಿ ಜನಿಸಿದ ಇವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಕನ್ನಡದಲ್ಲಿ ಸಾಹಿತ್ಯ ಸೇವೆ ಸಲ್ಲಿಸಿದವರು. ತೆಲುಗು, ಉರ್ದು ಭಾಷೆಯ ನೆಲದಲ್ಲಿ ಬದುಕು ಕಟ್ಟಿಕೊಂಡವರು. ಸಾಹಿತ್ಯ ಪ್ರಕಾರದ ಹಲವು ಮೌಲ್ಯಯುತ ಕೃತಿಗಳನ್ನು ನೀಡಿದ ಶ್ರೇಯ ಕೆ.ವಿ ತಿರುಮಲೇಶ್ ಅವರದ್ದು.

ಅಕ್ಷಯ ಕಾವ್ಯ, ಆಡು ಕನ್ನಡ ಹಾಡು ಕನ್ನಡ ಮಾತಾಡು ಕನ್ನಡವೇ, ಅರಭಿ, ಅವಧ, ಮುಖಾಮುಖಿ ಸೇರಿ 11 ಕವನ ಸಂಕಲನಗಳು, ಕಳ್ಳಿ ಗಿಡದ ಹೂ, ನಾಯಕ ಮತ್ತು ಇತರರು, ಅಪರೂಪದ ಕಥೆಗಳು, ಕೆಲವು ಕಥಾನಕಗಳು ಅನ್ನೋ ಕಥಾ ಸಂಕಲನಗಳು, ಮುಸುಗು, ಆರೋಪ, ಅನೇಕ ಎಂಬ ಕಾದಂಬರಿಗಳು ಸೇರಿದಂತೆ ವಿಮರ್ಶಾ ಕೃತಿಗಳು, ಅನುವಾದಗಳು, ನಾಟಕಗಳು, ಅಂಕಣ ಬರಹಗಳನ್ನು ಸಹ ಕೆ.ವಿ ತಿರುಮಲೇಶ್ ಅವರು ಬರೆದಿದ್ದಾರೆ. ಗಡಿನಾಡಿನ ಕನ್ನಡಿಗರಾದರೂ, ಕನ್ನಡದಲ್ಲಿಯೇ ತಮ್ಮ ಸಾಹಿತ್ಯದ ಸೇವೆ ಸಲ್ಲಿಸಿದವರು.




Leave a Reply

Your email address will not be published. Required fields are marked *

error: Content is protected !!