ಶಿಲ್ಪಾ ಪತಿ ವಿರುದ್ಧ ಪೂನಂ ಕೋರ್ಟ್ ಫೈಟ್

364

ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುವವಳು ಅಂದ್ರೆ ಪೂನಂ ಪಾಂಡೆ. ಇವಳನ್ನ ನಟಿ ಅಂತಾ ಹೇಳಿದ್ರೂ ಬಿಗ್ ಸ್ಕ್ರೀನ್, ಸ್ಮಾಲ್ ಸ್ಕ್ರೀನ್ ಗಿಂತ ಸೋಷಿಯಲ್ ಮೀಡಿಯಾದಲ್ಲಿ ತನ್ನ ಮೈಮಾಟ ತೋರಿಸಿ ಹೆಸರು ಮಾಡಿದವಳು. ಹೀಗಾಗಿ ಸದಾ ಸುದ್ದಿಯಲ್ಲಿರ್ತಾಳೆ. ಈಗ ಪೂನಂ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ ಕುಂದ್ರಾ ವಿರುದ್ಧ ಕಾನೂನು ಹೋರಾಟಕ್ಕೆ ರೆಡಿಯಾಗಿದ್ದಾಳೆ.

ಪೂನಂ armsprime media ಅನ್ನೋ ಅಪ್ಲಿಕೇಷನ್ ರೆಡಿ ಮಾಡುವ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾಳೆ. ಇದರ ಲಾಭದ ನಿಗದಿತ ಹಣ ಪೂನಂ ಪಾಲಾಗ್ತಿತ್ತು. ಆದ್ರೆ, ಲಾಭದಲ್ಲಿ ವ್ಯತ್ಯಾಸವಿದೆ ಅನ್ನೋದು ತಿಳಿದ ಪೂನಂ ಒಪ್ಪಂದ ರದ್ದು ಮಾಡಿದ್ದಾಳೆ.

ಈ ಬಗ್ಗೆ ರಾಜ ಕುಂದ್ರಾ ವಿರುದ್ಧ ದೂರು ದಾಖಲಿಸಲು ಹೋದ್ರೆ ಪೊಲೀಸ್ರು ತೆಗೆದುಕೊಂಡಿಲ್ವಂತೆ. ಹೀಗಾಗಿ ಪೂನಂ ಪಾಂಡೆ ಇದೀಗ ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ರೆಡಿಯಾಗಿದ್ದಾಳೆ. ಈ ಪ್ರಕರಣದಲ್ಲಿ ಉದ್ಯಮಿ ರಾಜ ಕುಂದ್ರಾ ಪಾತ್ರವೇನು ಅನ್ನೋದು ತಿಳಿದು ಬಂದಿಲ್ಲ.




Leave a Reply

Your email address will not be published. Required fields are marked *

error: Content is protected !!