ನೀಲಿ ಚಿತ್ರ ನಿರ್ಮಾಣ ಪ್ರಕರಣ: ರಾಜ್ ಕುಂದ್ರಾಗೆ ಜಾಮೀನು

541

ಪಜಾಸ್ತ್ರ ಸಿನಿಮಾ ಡೆಸ್ಕ್

ಮುಂಬೈ: ನೀಲಿ ಚಿತ್ರ ನಿರ್ಮಾಣ ಪ್ರಕರಣ ಸಂಬಂಧ ಜೈಲು ಸೇರಿದ್ದ ಉದ್ಯಮಿ ಹಾಗೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಜಾಮೀನು ನೀಡಲಾಗಿದೆ. 2 ತಿಂಗಳ ಬಳಿಕ ಮುಂಬೈನ ಆರ್ಥರ್ ರಸ್ತೆಯಲ್ಲಿರುವ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಸಿನಿಮಾ ದುನಿಯಾಗೆ ಬರುವ ಯುವ ನಟಿಯರು, ಮಾಡೆಲ್ ಗಳಿಗೆ ಗಾಳ ಹಾಕಿ ನೀಲಿ ಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ರಾಜ್ ಕುಂದ್ರಾ ವಿರುದ್ಧ ನಟಿಯರಾದ ಶರ್ಲಿನ್ ಚೋಪ್ರಾ ಹಾಗೂ ಪೂನಂ ಪಾಂಡೆ ಸಹ ಆರೋಪಿಸಿದ್ದಾರೆ.

ಮುಂಬೈ ಅಪರಾಧ ವಿಭಾಗದ ಪೊಲೀಸರು ಜುಲೈ ತಿಂಗಳಲ್ಲಿ ರಾಜ್ ಕುಂದ್ರಾನನ್ನು ಬಂಧಿಸಲಾಗಿತ್ತು. ನ್ಯಾಯಾಲಯಕ್ಕೆ 1,500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಬಂಧನದ ಬಳಿಕ ಜಾಮೀನು ಪಡೆಯಲು ಹಲವು ಬಾರಿ ಯತ್ನಿಸಿದ್ದರು. ಸೋಮವಾರ ಜಾಮೀನು ಸಿಕ್ಕಿದ್ದು, ಮಂಗಳವಾರ ಬಿಡುಗಡೆಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!