ಈ ಪ್ರೀ ವೆಡ್ಡಿಂಗ್ ಫೋಟೋಶೂಟ್ ವೈರಲ್ ಆಗಿದ್ದು ಯಾಕೆ?

217

ಪ್ರಜಾಸ್ತ್ರ ಸುದ್ದಿ

ಕೇರಳ: ಇತ್ತೀಚಿನ ದಿನಗಳಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ. ಹೀಗಾಗಿ ನವ ಜೋಡಿಗಳು ಇದಕ್ಕಾಗಿ ಸಾಕಷ್ಟು ವಿಶೇಷ ಜಾಗಗಳನ್ನು ಹುಡುಕಿಕೊಂಡು, ಭರ್ಜರಿಯಾಗಿ ಡ್ರೆಸ್ಸಿಂಗ್ ಮಾಡಿಕೊಂಡು ಫೋಟೋಶೂಟ್ ನಡೆಸುತ್ತಾರೆ. ಅದರಲ್ಲಿ ಕೆಲವು ವೈರಲ್ ಆಗುತ್ತವೆ.

ಇದೀಗ ಕೇರಳದಲ್ಲಿ ನಡೆಸಿದ ಪ್ರೀ ವೆಡ್ಡಿಂಗ್ ಫೋಟೋಶೂಟ್ ವೈರಲ್ ಆಗಿದೆ. ಕಾರಣ, ವಧು ರಸ್ತೆಯ ತುಂಬಾ ಬಿದ್ದಿರುವ ತಗ್ಗು ಗುಂಡಿಗಳ ನಡುವೆ ಫೋಟೋಶೂಟ್ ನಡೆಸಿರುವುದು. ಹಾಳಾದ ರಸ್ತೆಯಲ್ಲಿ ವಧು ಸರ್ಕಸ್ ಮಾಡುತ್ತಾಳೆ. ಈ ಫೋಟೋ, ವಿಡಿಯೋ ವೈರಲ್ ಆಗಲು ಕಾರಣ, ಅಲ್ಲಿನ ರಸ್ತೆಯ ಪರಿಸ್ಥಿತಿಯಿಂದ. ಕೇರಳದಲ್ಲಿನ ಕಳಪೆ ರಸ್ತೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!