ಪ್ರೆಸಿಡೆನ್ಸಿ ವಿವಿ 5ನೇ ಘಟಿಕೋತ್ಸವದಲ್ಲಿ 13 ವಿದ್ಯಾರ್ಥಿಗಳಿಗೆ ಚಿನ್ನದ ಪದಕ

318

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಗರದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವ ನವೆಂಬರ್ 26, ಶನಿವಾರ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಿತು. ಪ್ರೊ.ವಿಸಿಟರ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ ಅವರು ಆನ್ಲೈನ್ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಪದ್ಮಶ್ರೀ ಪುರಸ್ಕೃತರು ಮತ್ತು ಐಐಟಿ ಮದ್ರಾಸಿನ ಇನ್ ಕ್ಯುಬೇಷನ್ ಸೆಲ್‌, ಆರ್ಟಿಬಿಐ ಮುಖ್ಯಸ್ಥರಾದ ಪ್ರೊ.ಅಶೋಕ್‌ ಜುನ್‌ಜುನ್ ವಾಲ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳೇ ನೀವು  ಪ್ರಸ್ತುತ ಏನನ್ನು ಕಲಿತಿರುವಿರೊ ಅದು ಸಾಲದು. ಈ ಅವಸರದ ಜಗತ್ತಿನಲ್ಲಿ ವೇಗವಾಗಿ ಕಲಿಯುತ್ತಲೇ ಇರಬೇಕು. ದೇಶದ ಮುನ್ನಡೆಗೆ ಸಮಾಜದೊಂದಿಗೆ ಐಕ್ಯತಾ ಮನೋಭಾವದಿಂದ ಮುಂದುವರಿದು ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಘಟಿಕೋತ್ಸವದಲ್ಲಿ 13 ಚಿನ್ನದ ಪದಕಗಳನ್ನು ಮತ್ತು 47 ಪಿ.ಎಚ್.ಡಿ ಪದವಿಗಳನ್ನು ಪ್ರದಾನ ಮಾಡಲಾಯಿತು. ಜೊತೆಗೆ ನಿರ್ವಹಣಾ‌, ಕಾನೂನು, ಇಂಜಿನಿಯರಿಂಗ್‌, ಮಾಹಿತಿ ವಿಜ್ಞಾನ, ವಾಣಿಜ್ಯ ನಿಕಾಯಗಳಿಂದ 689 ಸ್ನಾತಕೋತ್ತರ ಮತ್ತು 2531 ಪದವೀಧರ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ನೀಡಲಾಯಿತು.

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಾಧಿಪತಿಗಳಾದ ನಿಸಾರ್‌ ಅಹಮದ್‌, ಉಪಕುಲಪತಿಗಳಾದ ಡಾ.ಸುಭಾಕರ್‌, ಪ್ರೆಸಿಡೆನ್ಸಿ ಶಿಕ್ಷಣ ಸಮೂಹದ ಸಿಒಒ. ಸುಹೈಲ್‌ ಅಹಮದ್‌, ನಿರ್ದೇಶಕರಾದ ನಫೀಸಾ ಅಹಮದ್‌, ಉಸ್ತುವಾರಿ ಕುಲಸಚಿವರಾದ ಡಾ.ಅಬ್ದುಲ್‌ ಬಾರಿ, ಉನ್ನತ ಅಧಿಕಾರಿ ವರ್ಗದವರು, ನಿಕಾಯದ ಡೀನ್ ಗಳು, ಅಸೋಸಿಯೇಟ್‌ ಡೀನ್‌ ಗಳು, ಅಸಿಸ್ಟೆಂಟ್‌ ಡೀನ್ ಗಳು, ವಿಭಾಗದ  ಮುಖ್ಯಸ್ಥರು, ಬೋಧಕ ಬೋಧಕೇತರ ವರ್ಗದವರು ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!