ರಾಷ್ಟ್ರಪತಿ ಚುನಾವಣೆ: 98 ನಾಮಪತ್ರ.. ಉಳಿದಿದ್ದು ಇಬ್ಬರು!

212

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಜುಲೈ 18ರಂದು ನಡೆಯುವ ರಾಷ್ಟ್ರಪತಿ ಚುನಾವಣೆಗೆ 98 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, ಕೊನೆಗೆ ಉಳಿದಿದ್ದು ಇಬ್ಬರು ಅಭ್ಯರ್ಥಿಗಳು ಮಾತ್ರ. ಎನ್ ಡಿಎ ಅಭ್ಯರ್ಥಿ ಮುರ್ಮು, ಪ್ರತಿಪಕ್ಷಗಳ ಅಭ್ಯರ್ಥಿ ಸಿನ್ಹಾ ಮಾತ್ರ ಕಣದಲ್ಲಿದ್ದಾರೆ.

98 ಅಭ್ಯರ್ಥಿಗಳಲ್ಲಿ 26 ಮಂದಿಯ ನಾಮಪತ್ರ ಭರ್ತಿ ಮಾಡುವ ಸಂದರ್ಭದಲ್ಲಿಯೇ ತಾಂತ್ರಿಕ ಕಾರಣಗಳಿಂದ ರದ್ದಾಗಿವೆ. ಇನ್ನು 70 ಮಂದಿಯಲ್ಲಿ ಕೆಲವರದ್ದು ರಾಷ್ಟ್ರಪತಿ ಸ್ಥಾನಕ್ಕೆ ಅರ್ಹತೆಗಳು ಇರಲಿಲ್ಲವೆಂದು ತಿರಸ್ಕಾರಗೊಂಡರೆ, ಇನ್ನು ಕೆಲವರು 15 ಸಾವಿರ ಠೇವಣಿ ಇಡಲು ಆಗದೆ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಹೀಗಾಗಿ ಅಂತಿಮವಾಗಿ ಮುರ್ಮು, ಸಿನ್ಹಾ ಉಳಿದಿದ್ದಾರೆ. ಸಂಸತ್ತಿನಲ್ಲಿ ಪಕ್ಷಗಳ ಬಲಾಬಲ ನೋಡಿದರೆ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲ್ಲುವ ಸಾಧ್ಯತೆ ಹೆಚ್ಚಿದೆ.




Leave a Reply

Your email address will not be published. Required fields are marked *

error: Content is protected !!