ನಟಿ ರಂಭಾ ಕಾರು ಅಪಘಾತ: ಮಗಳ ಸ್ಥಿತಿ ಗಂಭೀರ

232

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬಹುಭಾಷಾ ನಟಿ ರಂಭಾ ಕಾರು ಅಪಘಾತವಾಗಿದ್ದು, ಮಗಳಿಗೆ ಗಂಭೀರ ಗಾಯಗಳಾಗಿವೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆನಾಡದಲ್ಲಿ ಈ ಘಟನೆ ನಡೆದಿದೆ.

ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಾನು, ನನ್ನಿಬ್ಬರು ಮಕ್ಕಳು ಹಾಗೂ ಮನೆ ಕೆಲಸದಾಕೆಯೊಂದಿಗೆ ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಮನೆಗೆ ಹೊರಟಿದ್ದಾಗ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ. ಮಗಳು ಸಶಾ ಆಸ್ಪತ್ರೆಯಲ್ಲಿದ್ದು, ಅವಳ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದಿದ್ದಾರೆ.

ನಟಿ ರಂಭಾ 90ರ ದಶಕದ ಸ್ಟಾರ್ ನಟಿಯಾಗಿದ್ದಾರೆ. ಭಾರತದ ಸೂಪರ್ ಸ್ಟಾರ್ ನಟರೊಂದಿಗೆ ಚಿತ್ರಗಳನ್ನು ಮಾಡಿದ್ದಾರೆ. ಕೆನಡಾ ಮೂಲದ ಉದ್ಯಮಿ  ಇಂದ್ರನ್ ಪತ್ಮನಾಥನ್ ಅವರೊಂದಿಗೆ 2010ರಲ್ಲಿ ಮದುವೆಯಾದರು. ಕೆನಡಾದ ಟೊರಂಟೊದಲ್ಲಿ ವಾಸವಾಗಿದ್ದು, ಇಬ್ಬರು ಹೆಣ್ಮಕ್ಕಳು, ಒಬ್ಬ ಮಗನಿದ್ದಾನೆ.


TAG


Leave a Reply

Your email address will not be published. Required fields are marked *

error: Content is protected !!