ಶ್ರೀನಗರದಲ್ಲಿ ಕಾಮುಕರ ಅಟ್ಟಹಾಸ..

345

ಶ್ರೀನಗರ : ಮೂರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಮಾಸುವ ಮೊದ್ಲೇ ಮತ್ತೊಂದು ಅತ್ಯಾಚಾರ ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ.

ಶ್ರೀನಗರದ ಗಂದೇರ್ಬಾಲ್ ನ ಬಾಲಕಿ ಮೇಲೆ ಸ್ಥಳೀಯ ನಿವಾಸಿ ಮೊಹಮ್ಮದ್ ಆಸಿಫ್ ವಾನಿ ಎಂಬಾತ  ಅತ್ಯಾಚಾರ ನಡೆಸಿದ ಆರೋಪಿ ಎನ್ನಲಾಗುತ್ತಿದೆ. ಬಾಲಕಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಹೆತ್ತವರು ಗಂದೇರ್ಬಾಲ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಆರೋಪಿ ಮೊಹಮ್ಮದ್ ವಾನಿ ವಿರುದ್ಧ ಐಪಿಸಿ ಸೆಕ್ಷನ್ 451, 376 ಅಡಿಯಲ್ಲಿ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಶಾಲೆಗೆ ಹೊರಟಿದ್ದ ಬಾಲಕಿಗೆ ತಿಂಡಿಯ ಆಸೆ ತೋರಿಸಿದ ಆರೋಪಿ ಆಕೆಯನ್ನ ನಿರ್ಜನ ಪ್ರದೇಶಕ್ಕೆ ಕರೆದ್ಯೊಯ್ದು ಅತ್ಯಾಚಾರ ಎಸೆಗಿದ್ದಾನೆ ಎನ್ನಲಾಗುತ್ತಿದೆ. ಘಟನೆ ಕುರಿತು ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಕೂಡ ಘಟನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!