ಸಾಮಾಜಿಕ ಹೋರಾಟಗಾರ್ತಿಯಿಂದ ಇದೆಂಥಾ ಕೆಲಸ?

502

ಪ್ರಜಾಸ್ತ್ರ ಸುದ್ದಿ

ಕೇರಳ: ಸಾಮಾಜಿಕ ಹೋರಾಟಗಾರ್ತಿ, ಮಾಡೆಲ್ ರೆಹನಾ ಫಾತಿಮಾ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾಳೆ. ಇಬ್ಬರು ಮಕ್ಕಳಿಂದ ಬಾಡಿ ಪೇಟಿಂಗ್ ಮಾಡಿಸಿಕೊಂಡಿದ್ದಾಳೆ. ಅರೆಬೆತ್ತಲೆಯಾಗಿ ಕಾಣಿಸಿಕೊಂಡಿರುವ ರೆಹನಾ ಫಾತಿಮಾ, ಬಾಡಿ ಆ್ಯಂಡ್ ಪಾಲಿಟಿಕ್ಸ್ ಹೆಸರಿನಲ್ಲಿ ವಿಡಿಯೋ ಶೇರ್ ಮಾಡಿದ್ದಾಳೆ.

ಸೆಕ್ಸ್ ಹಾಗೂ ಪಾಲಿಟಿಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಈ ರೀತಿ ಅರೆಬೆತ್ತಲೆಯಾಗಿ ಬಾಡಿ ಪೇಟಿಂಗ್ ಮಾಡಿಸಿಕೊಂಡಿದ್ದಾಳೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ವಕೀಲ ಅರುಣ ಪ್ರಕಾಶ ಎಂಬುವರು ದೂರು ದಾಖಲಿಸಿದ್ದಾರೆ. ಮಕ್ಕಳನ್ನ ಬಳಸಿಕೊಂಡಿರುವ ಕಾರಣಕ್ಕೆ ಐಟಿ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಿಸಿದ್ದಾರೆ.

ಕೇಸ್ ತೆಗೆದುಕೊಂಡಿರುವ ಪೊಲೀಸ್ರು ರೆಹನಾ ಫಾತಿಮಾ ಮನೆ ಮೇಲೆ ದಾಳಿ ಮಾಡಿ, ಮೊಬೈಲ್ ಹಾಗೂ ಲಾಪ್ ಟಾಪ್ ವಶಪಡಿಸಿಕೊಂಡಿದ್ದಾರೆ. ಉದ್ದೇಶಪೂರ್ವಕವಾಗಿ ವಿಡಿಯೋ ಶೇರ್ ಮಾಡಿದ್ದಾರೆ ಎನ್ನಲಾಗ್ತಿದ್ದು, ರೆಹನಾ ಫಾತಿಮಾ ಎಸ್ಕೇಪ್ ಆಗಿದ್ದಾಳೆ.

ಹೆಣ್ಮಕ್ಕಳನ್ನ ಶಬರಿಮಲೆ ದೇವಸ್ಥಾನಕ್ಕೆ ನಿಷೇಧ ಸಂಬಂಧ ನಡೆದ ಹೋರಾಟದಲ್ಲಿ ಭಾಗವಹಿಸಿದ್ದ ರೆಹನಾ ಫಾತಿಮಾ, ದೇಗುಲ ಪ್ರವೇಶ ಮಾಡಲು ಮುಂದಾದ ಹೆಣ್ಮಕ್ಕಳಲ್ಲಿ ಇವಳು ಒಬ್ಳು. ಅಂದಿನಿಂದ ಮೀಡಿಯಾ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ಳು. ಇದೀಗ ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡಿದ್ದಾಳೆ.




Leave a Reply

Your email address will not be published. Required fields are marked *

error: Content is protected !!