ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷರಿಗೆ ಆಹ್ವಾನ

275

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಜನವರಿ 26ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಬೇರೆ ಬೇರೆ ದೇಶದ ನಾಯಕರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸುವುದು ವಾಡಿಕೆ. ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷ ಯಾರಿಗೂ ಆಹ್ವಾನ ನೀಡಿರಲಿಲ್ಲ. ಜನವರಿ 26, 2023ರ ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಇಲ್ ಸಿಸಿ ಅವರಿಗೆ ಆಹ್ವಾನಿಸಲಾಗಿದೆ.

ಅರಬ್ ರಿಪಬ್ಲಿಕ್ ಆಫ್ ಈಜಿಪ್ಟ್ ಅಧ್ಯಕ್ಷರು ಗಣರಾಜ್ಯೋತ್ಸವದ ಮುಖ್ಯಅತಿಥಿಯಾಗಿ ಬರುತ್ತಿರುವುದು ಇದೆ ಮೊದಲು. ಕಳೆದ ಅಕ್ಟೋಬರ್ 16ರಂದು ವಿದೇಶಾಂಗ ಸಚಿವ ಜೈಶಂಕರ್ ಅವರು ಕೈರೋದಲ್ಲಿ ಸಿಸಿ ಅವರನ್ನು ಭೇಟಿ ಔಪಚಾರಿಕ ಆಹ್ವಾನ ನೀಡಿದ್ದರು. ಈಗ ಆಹ್ವಾನದ ಕುರಿತು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.




Leave a Reply

Your email address will not be published. Required fields are marked *

error: Content is protected !!