ಬಸವಕಲ್ಯಾಣದಲ್ಲಿ ಬಸವ ಉತ್ಸವಕ್ಕೆ ಮನವಿ

130

ಪ್ರಜಾಸ್ತ್ರ ಸುದ್ದಿ

ಬೀದರ್: ಹಲವು ಕಾರಣಗಳಿಂದ ಬಸವ ಉತ್ಸವ ಬಸವಕಲ್ಯಾಣದಲ್ಲಿ ಆಯೋಜಿಸಿಲ್ಲ. ಹೀಗಾಗಿ ಈ ವರ್ಷ ಬಸವ ಉತ್ಸವ ನಡೆಸಬೇಕು ಎಂದು, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕರಾದ ಶ್ರೀಕಾಂತ ಸ್ವಾಮಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಬಸವಾದಿ ಶರಣರ ಕಲ್ಯಾಣ ಕ್ರಾಂತಿಯ ವಿಚಾರ ಧಾರೆಗಳು, ಅಂದರೆ ಕಂದಾಚಾರ, ಮೂಢ ನಂಬಿಕೆ, ಮೌಢ್ಯಗಳು, ಜಾತಿ ಭೇದ-ಲಿಂಗ ಭೇದ-ವರ್ಣ ಭೇದ-ಅಸಮಾನತೆ, ಅಸ್ಪೃಷತೆ ವಿರೋಧ, ಕಾಯಕ ದಾಸೋಹ, ಕರ್ಮ ಸಿದ್ಧಾಂತಗಳ ಹೋರಾಟ ಮಾಡಿ ಆಧುನಿಕ ಸಮಾಜಕ್ಕೆ ಬಸವ ತತ್ವಗಳನ್ನು ಪ್ರಚಾರ ಮಾಡುವ ಒಂದು ಕಾರ್ಯಕ್ರಮ ಬಸವ ಉತ್ಸವವಾಗಿದೆ.

ಬಸವ ಉತ್ಸವ ಕೇವಲ ಕಲ್ಯಾಣ ಕರ್ನಾಟಕ ಸೀಮಿತ ಅಲ್ಲದೆ ಇಡೀ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಗುಜರಾತ ಮತ್ತು ತಮಿಳುನಾಡು ಜನ ಭಾಗವಹಿಸುತ್ತಾರೆ. ಮಧ್ಯಪ್ರದೇಶದ ಕಲಚುರಿ ಭಾಗದ 110 ಹಳ್ಳಿಗಳಲ್ಲಿ ಕನ್ನಡ ಮಾತಾಡುವ ಬಸವಾದಿ ಶರಣರ ಬಾಂಧವರು ಇದ್ದಾರೆ ಎಂದು ತಿಳಿದು ಬಂದಿದೆ. ನಾವು, ಕೇಂದ್ರ ಸಚಿವ ಭಗವಾನ ಖೂಬಾ ಅವರ ನೆರವಿನಿಂದ ಆ ಭಾಗದ ಶಾಸಕರು ಸಂಸದರ ಸಂಪರ್ಕದಿಂದ ಅಶೋಕ ದೋಮ್ಲೂರ ಅವರು ಆ ಪ್ರದೇಶದಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಕಾಶ್ಮೀರ ರಾಜ್ಯದ ಜಮ್ಮುವಿನ ವಿಶ್ವವಿದ್ಯಾಲಯದಲ್ಲಿ, ತಿರುಪತಿ ವಿಶ್ವವಿದ್ಯಾಲಯದಲ್ಲಿ, ಪಾಂಡಿಚೇರಿ ವಿಶ್ವವಿದ್ಯಾಲಯದಲ್ಲಿ ಕೂಡ ಬಸವಾದಿ ಶರಣರ ವಚನಗಳ ತಾಡೋಲೆಗಳು ಸಿಕಿವೆ. ಮಧ್ಯಪ್ರದೇಶದ ಜನ ಕೂಡ ಬಸವ ಉತ್ಸವದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ. ಹೀಗಾಗಿ ಈ ವರ್ಷ ಬಸವ ಉತ್ಸವ ನೆರವೇರಿಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!