ಗುಮ್ಮಟನಗರಿ 8 ಸ್ಥಾನಗಳಲ್ಲಿ 6 ‘ಕೈ’ ವಶ

142

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗುದ್ದುಗೆ ಏರಲು ಸಜ್ಜಾಗಿದ್ದು, ಸಿಎಂ ಯಾರು ಅನ್ನೋ ಚರ್ಚೆ ಶುರುವಾಗಿದೆ. ಆಡಳಿತ ವಿರೋಧಿ ಅಲೆ ಗುಮ್ಮಟನಗರಿ ಮೇಲೂ ಆಗಿದ್ದು, 8 ಕ್ಷೇತ್ರಗಳಲ್ಲಿ 6 ಕಾಂಗ್ರೆಸ್, 1 ಬಿಜೆಪಿ, 1 ಜೆಡಿಎಸ್ ಗೆಲುವು ಸಾಧಿಸಿವೆ.

ಮುದ್ದೇಬಿಹಾಳದಲ್ಲಿ ಬಿಜೆಪಿ ಶಾಸಕರಿದ್ದ ಎ.ಎಸ್ ಪಾಟೀಲ ನಡಹಳ್ಳಿ ವಿರುದ್ಧ ಕಾಂಗ್ರೆಸ್ ನ ಸಿ.ಎಸ್ ನಾಡಗೌಡ ಗೆಲುವು ದಾಖಲಿಸಿದ್ದಾರೆ. ಸಿಂದಗಿಯ ಬಿಜೆಪಿ ಶಾಸಕರಾಗಿದ್ದ ರಮೇಶ ಭೂಸನೂರ ವಿರುದ್ಧ ಕಾಂಗ್ರೆಸ್ ಅಶೋಕ ಮನಗೂಳಿ ವಿಜಯ ಸಾಧಿಸಿದ್ದಾರೆ. ನಾಗಠಾಣದಲ್ಲಿ ಜೆಡಿಎಸ್ ಶಾಸಕರಾಗಿದ್ದ ದೇವಾನಂದ ಚವ್ಹಾಣ ವಿರುದ್ಧ ಕಾಂಗ್ರೆಸ್ ನ ವಿಠ್ಠಲ ಕಟ್ಕದೊಂಡು ಗೆಲುವು ಕಂಡಿದ್ದಾರೆ.

ಇನ್ನು ಬಬಲೇಶ್ವರದಲ್ಲಿ ಎಂ.ಬಿ ಪಾಟೀಲ, ಬಸವನಬಾಗೇವಾಡಿಯಲ್ಲಿ ಶಿವಾನಂದ ಪಾಟೀಲ, ಇಂಡಿಯಲ್ಲಿ ಯಶವಂತರಾಯಗೌಡ ಪಾಟೀಲ ಗೆಲ್ಲುವ ಮೂಲಕ ಕಾಂಗ್ರೆಸ್ ಸ್ಥಾನ ಮತ್ತಷ್ಟು ಭದ್ರಗೊಳಿಸಿದ್ದಾರೆ. ವಿಜಯಪುರ ನಗರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ದೇವರ ಹಿಪ್ಪರಗಿಯಲ್ಲಿ ಜೆಡಿಎಸ್ ನ ರಾಜುಗೌಡ ಪಾಟೀಲ ಗೆಲುವು ದಾಖಲಿಸಿದ್ದಾರೆ.

ನಾಗಠಾಣದಲ್ಲಿ ಬಿಜೆಪಿಯ ಸಂಜೀವ ಐಹೊಳೆ, ಜೆಡಿಎಸ್ ಶಾಸಕರಾಗಿದ್ದ ದೇವಾನಂದ ಚವ್ಹಾಣ ಸೋಲು ಕಂಡಿದ್ದಾರೆ. ದೇವರ ಹಿಪ್ಪರಗಿಯಲ್ಲಿ ಕಾಂಗ್ರೆಸ್ ನ ಶರಣಪ್ಪ ಸುಣಗಾರ, ಬಿಜೆಪಿ ಶಾಸಕರಾಗಿದ್ದ ಸೋಮನಗೌಡ ಪಾಟೀಲ ಸಾಸನೂರ ಸೋತಿದ್ದಾರೆ. ವಿಜಯಪುರ ನಗರದಲ್ಲಿ ಕಾಂಗ್ರೆಸ್ ನ ಅಬ್ದುಲ್ ಹಮೀದ್ ಮುಶ್ರಫ್ ಸೋಲು, ಬಸವನಬಾಗೇವಾಡಿಯಲ್ಲಿ ಬಿಜೆಪಿಯ ಎಸ್.ಕೆ ಬೆಳ್ಳುಬ್ಬಿ, ಜಡಿಎಸ್ ನ ಅಪ್ಪುಗೌಡ ಪಾಟೀಲ ಸೋಲು, ಬಬಲೇಶ್ವರದಲ್ಲಿ ಬಿಜೆಪಿಯ ವಿಜಯಕುಮಾರ ಪಾಟೀಲ, ಜೆಡಿಎಸ್ ನ ಬಸವರಾಜ ಹೊನವಾಡ ಸೋಲು.

ಸಿಂದಗಿಯಲ್ಲಿ ಬಿಜೆಪಿ ಶಾಸಕರಾಗಿದ್ದ ರಮೇಶ ಭೂಸನೂರ, ಜೆಡಿಎಸ್ ನ ವಿಶಾಲಾಕ್ಷಿ ಪಾಟೀಲ ಸೋಲು, ಇಂಡಿಯಲ್ಲಿ ಬಿಜೆಪಿಯ ಕಾಸುಗೌಡ ಪಾಟೀಲ, ಜೆಡಿಎಸ್ ನ ಬಿ.ಡಿ ಪಾಟೀಲ ಸೋಲು ಅನುಭವಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!