ಸ್ಯಾಂಡಲ್ ವುಡ್ ಅಂಗಳದಲ್ಲಿ ಪೊಗರು ಚಿತ್ರ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಡಿಫರೆಂಟ್ ಲುಕ್, ಗೆಟಪ್ ಪಡ್ಡೆ ಹುಡ್ಗರನ್ನ ಸಿಕ್ಕಾಪಟ್ಟೆ ಇಷ್ಟವಾಗಿದೆ. ಪೋಸ್ಟರ್, ಡೈಲಾಗ್ ಟ್ರೇಲರ್ ನಲ್ಲಿ ಧೂಳೆಬ್ಬಿಸಿದ್ದ ಪೊಗರು ಟೀಂ, ಇದೀಗ ಸಾಂಗ್ ನಲ್ಲಿಯೂ ಹವಾ ಮಾಡಿದೆ.
ಡಿ ಬಾಸ್ ದರ್ಶನ ಅಭಿನಯದ ರಾಬರ್ಟ್ ಚಿತ್ರದ ಜೈ ಶ್ರೀರಾಮ ಹಾಡಿನ ನ್ಯೂ ವರ್ಸನ್ ನಿನ್ನ ಬೆಳಗ್ಗೆ 10.05ಕ್ಕೆ ರಿಲೀಸ್ ಮಾಡಲಾಗಿದೆ. ಈ ಹಾಡು ಒಂದು ದಿನದಲ್ಲಿ 6 ಲಕ್ಷ ಮೀರಿ ವೀಕ್ಷಣೆ ಪಡೆದಿದೆ. ಇದನ್ನ ಬೀಟ್ ಮಾಡಿರುವ ಪೊಗರು ಚಿತ್ರದ ಖರಾಬು.. ಬಾಸು ಖರಾಬು.. ಸುಮ್ನೆ ಓಡೋಗು ಅನ್ನೋ ಹಾಡು ಬರೋಬ್ಬರಿ 26 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.
ಖರಾಬು ಹೆಸರಿನ ಹಾಡು ನಿನ್ನೆ ಸಂಜೆ 5.55ಕ್ಕೆ ರಿಲೀಸ್ ಆಗಿದೆ. ಅದಾಗ್ಲೇ 26 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ಯುಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ. ಈ ಮೂಲಕ ಡಿ ಬಾಸ್ ನಟನೆಯ ರಾಬರ್ಟ್ ಚಿತ್ರದ ಜೈ ಶ್ರೀರಾಮ ನ್ಯೂ ವರ್ಸನ್ ಸಾಂಗ್ ವೀಕ್ಷಣೆಗಿಂತ ಮೂರುಪಟ್ಟು ಹೆಚ್ಚು ವೀಕ್ಷಣೆ ಪಡೆದು ರೆಕಾರ್ಡ್ ಬ್ರೇಕ್ ಮಾಡಿದೆ.