ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ಇಂದು ಬೆಳಗ್ಗೆ ಹಾವೊಂದು ಕಚ್ಚಿದೆ. ಸಲ್ಲುಗೆ ಸೇರಿದ ಪನ್ವೆಲಾ ಫಾರ್ಮ್ ಹೌಸ್ ನಲ್ಲಿ ಹಾವು ಕಚ್ಚಿದೆ.
ಹಾವು ಕಚ್ಚಿದ ತಕ್ಷಣ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ತುಂಬಾ ವಿಷಕಾರಿಯಲ್ಲದ ಹಾವು ಕಚ್ಚಿರುವುದರಿಂದ ಆಂಟಿ ಡೋಸ್ ಇಂಜೆಕ್ಷನ್ ಕೊಡಲಾಗಿದೆ. ಅಲ್ದೇ, ಆಸ್ಪತ್ರೆಯಲ್ಲಿ ಕೆಲ ಗಂಟೆಗಳ ಕಾಲ ಅಡ್ಮಿಟ್ ಮಾಡಿಕೊಳ್ಳಲಾಗಿತ್ತು. ನಂತರ ಅವರನ್ನು ಮನೆಗೆ ಕಳುಹಿಸಿಕೊಡಲಾಗಿದೆ.
ಕಳೆದ ರಾತ್ರಿ ಕೆಲ ಆಪ್ತರೊಂದಿಗೆ ಫಾರ್ಮ್ ಹೌಸ್ ನಲ್ಲಿ ಕಿಟ್ಟಿ ಪಾರ್ಟಿ ಇಟ್ಟುಕೊಂಡಿದ್ದರು. ಇತ್ತೀಚೆಗೆ ಮುಗಿದ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಪಾರ್ಟಿ ನಡೆಸಲಾಗಿತ್ತು. ಬೆಳಗ್ಗೆ ಫಾರ್ಮ್ ಹೌಸ್ ನಲ್ಲಿ ಸುತ್ತಾಡುವಾಗ ಹಾವು ಕಚ್ಚಿದೆ.