ಸಾವಿತ್ರಿ ಜಿಂದಾಲ್ ಏಷ್ಯದ ಅತಿ ಸರಿವಂತ ಮಹಿಳಾ ಉದ್ಯಮಿ

170

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಏಷ್ಯಾದ ಅತಿ ಸಿರಿವಂತ ಮಹಿಳಾ ಉದ್ಯಮಿಯಾಗಿದ್ದ ಚೀನಾದ ಯಾಂಗ್ ಹುಯಿಯಾನ್ ಅವರ ನಂಬರ್ ಸ್ಥಾನವನ್ನು ಭಾರತದ ಸಾವಿತ್ರಿ ಜಿಂದಾಲ್ ಅವರು ಪಡೆದುಕೊಂಡಿದ್ದಾರೆ. ಲೋಹಗಳು ಹಾಗೂ ವಿದ್ಯುತ್ ಉತ್ಪಾದನೆ ಸೇರಿ ವಿವಿಧ ಕೈಗಾರಿಕಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಜಿಂದಾಲ್ ಕಂಪನಿ, 11.3 ಬಿಲಿಯನ್ ಡಾಲರ್ ಸಂಪತ್ತು ಹೊಂದಿದೆ.

ಕಂಪನಿಗಳ ಷೇರು ಮೌಲ್ಯ ಕುಸಿತದಿಂದಾಗಿ ಯಾಂಗ್ ಆಸ್ತಿ 11 ಬಿಲಿಯನ್ ಡಾಲರ್ ಗೆ ಇಳಿಕೆಯಾಗಿದೆ. ಹೀಗಾಗಿ ಮೊದಲ ಸ್ಥಾನವನ್ನು ಭಾರತದ 72 ವರ್ಷದ ಸಾವಿತ್ರಿ ಜಿಂದಾಲ್ ಅಲಂಕರಿಸಿದ್ದಾರೆ. 2005ರಲ್ಲಿ ಸಾವಿತ್ರಿ ಜಿಂದಾಲ್ ಪತಿ ಓ.ಪಿ ಜಿಂದಾಲ್ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಬಳಿಕ, ಕಂಪನಿಯ ಚುಕ್ಕಾಣಿ ಹಿಡಿದರು.




Leave a Reply

Your email address will not be published. Required fields are marked *

error: Content is protected !!