ಶಿಂಧೆ ಬಣ ತಂಗಿದ್ದ ಹೋಟೆಲ್ ಬಿಲ್ 8 ದಿನಕ್ಕೆ 70 ಲಕ್ಷ!

184

ಪ್ರಜಾಸ್ತ್ರ ಸುದ್ದಿ

ಮುಂಬೈ: ಶಿವಸೇನೆ, ಎನ್ ಸಿಪಿ, ಕಾಂಗ್ರೆಸ್ ಮೈತ್ರಿಯ ಸರ್ಕಾರ ಕೆಡವಿ ಸಿಎಂ ಆದ ಏಕನಾಥ್ ಶಿಂಧೆ ಟೀಂ ಫುಲ್ ಖುಷಿಯಾಗಿದೆ. ಬಿಜೆಪಿಯೊಂದಿಗೆ ಕೈ ಜೋಡಿ ಶಿಂಧೆ ಸಿಎಂ ಆಗಿದ್ದಾರೆ. ಮಾಜಿ ಸಿಎಂ ಫಡ್ನಾವಿಸ್ ಡಿಸಿಎಂ ಆಗಿದ್ದಾರೆ. ಸರ್ಕಾರದ ವಿರುದ್ಧ ಬಂಡಾಯವೆದ್ದ ಶಾಸಕರು ಮೊದಲು ಹೋಗಿದ್ದು ಅಸ್ಸಾಂನ ಗುವಾಹಟಿಯೊಂದರ ಹೋಟೆಲ್ ಗೆ.

ಸರ್ಕಾರ ಪತನಕ್ಕೆ ಸಾಕಷ್ಟು ಪಾಲಿಟ್ರಿಕ್ಸ್ ನಡೆಸಲಾಯಿತು. ಹೀಗಾಗಿ ಬಂಡಾಯ ಶಾಸಕರು ಅಸ್ಸಾಂ, ಗುಜರಾತ್, ಗೋವಾ ಎಂದೆಲ್ಲ ಸುತ್ತಾಡಿದರು. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಈ ಶಾಸಕರು ಉಳಿದುಕೊಂಡರು. ಮೈತ್ರಿ ಸರ್ಕಾರ ಕೆಡವಲು ಮೊದಲು ವೇದಿಕೆಯಾಗಿದ್ದು ಗುವಾಹಟಿಯ ಹೋಟೆಲ್.

ಗುವಾಹಟಿಯ ರ್ಯಾಡಿ ಸನ್ ಬ್ಯೂ ಹೋಟೆಲ್ ನಲ್ಲಿ ಸುಮಾರು 8 ದಿನ ಬಂಡಾಯ ಶಾಸಕರು ತಂಗಿದ್ದು, ಇದರ ಬಿಲ್ ಬರೋಬ್ಬರಿ 70 ಲಕ್ಷ ರೂಪಾಯಿಯಂತೆ. ಜೂನ್ 22ರಿಂದ 29ರ ತನಕ ಬಂಡಾಯ ಶಾಸಕರು, ಅವರ ಆಪ್ತರಿಗಾಗಿ ಹೋಟೆಲ್ ನ ವಿವಿಧ ಮಹಡಿಯಲ್ಲಿ 70 ರೂಮ್ ಗಳನ್ನು ಬುಕ್ ಮಾಡಿದರಂತೆ. ಈ ವೇಳೆ ಇತರೆ ಗ್ರಾಹಕರ ಸೇವೆಯನ್ನು ಬಂದ್ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಉದ್ದವ್ ಠಾಕ್ರೆ ಸರ್ಕಾರವನ್ನು ಕೆಡವಿದ ಶಾಸಕರಿದ್ದ ಹೋಟೆಲ್ ಬಾಡಿಗೆ 70 ಲಕ್ಷ ರೂಪಾಯಿಯನ್ನು ಕಟ್ಟಿದೆ ಎಂದು ತಿಳಿದು ಬಂದಿದೆ. ಅದು ಕೇವಲ 8 ದಿನಕ್ಕೆ. ಜನಸಾಮಾನ್ಯರು, ಮಧ್ಯಮ ವರ್ಗದವರು ವರ್ಷಪೂರ್ತಿ ದುಡಿದರು ಇಷ್ಟೊಂದು ಹಣ ಸಂಪಾದಿಸಲು ಆಗಲ್ಲ.




Leave a Reply

Your email address will not be published. Required fields are marked *

error: Content is protected !!