ಶ್ರೀಶೈಲಕ್ಕೆ ಪಾದಯಾತ್ರೆ ಹೊರಟ ಭಕ್ತರು

236

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಹೋಳಿ ಹುಣ್ಣಿಮೆಯ ಬೂದಿ ಚೆಲ್ಲಿದ ಮರುದಿನದಿಂದಲೇ ಶ್ರೀಶೈಲ ಮಲ್ಲಯ್ಯನ ದರ್ಶನಕ್ಕೆ ಭಕ್ತರ ಪಾದಯಾತ್ರೆ ಶುರುವಾಗುತ್ತೆ. ಅದರಂತೆ ಈ ವರ್ಷದ ಪಾದಯಾತ್ರೆ ಗುರುವಾರದಿಂದ ಶುರುವಾಗಿದೆ. ತಾಲೂಕಿನ ವಿವಿಧ ಗ್ರಾಮಗಳ ಭಕ್ತರು ಶ್ರೀಶೈಲ ಮಲ್ಲಯ್ಯನತ್ತ ಪ್ರಯಾಣ ಬೆಳೆಸಿದ್ದಾರೆ.

ಇಂದು ಮಲ್ಲಯ್ಯನ ಕಂಬಿಗಳು ಪಟ್ಟಣದ ಹೊರವಲಯದಲ್ಲಿರುವ ಪಾದಗಟ್ಟೆಯಲ್ಲಿ ಪ್ರತಿಷ್ಠಾಪನೆಗೊಂಡಿದ್ದು, ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ದರ್ಶನ ಪಡೆಯುತ್ತಿದ್ದಾರೆ. ಎಲ್ಲ ರೀತಿಯ ಜಾತಿ, ವರ್ಗದ ಜನರು ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ. ಇಲ್ಲಿಂದ ಕಂಬಿಗಳು ನಾಳೆ ಮುಂದಿನ ಪ್ರಯಾಣ ಬೆಳಸಲಿವೆ.

ದರ್ಶನಕ್ಕೆ ಬಂದ ಭಕ್ತರಿಗೆ, ಪಾದಯಾತ್ರೆ ಹೊರಟ ಭಕ್ತರಿಗೆ ಬಾಳೆಹಣ್ಣು, ದ್ರಾಕ್ಷಿ, ಮಜ್ಜಿಗೆ ಸೇವೆಯನ್ನು ಸ್ಥಳೀಯರು ನೀಡುತ್ತಿದ್ದಾರೆ. ದಾಸೋಹದ ಮೂಲಕ ಮಲ್ಲಯ್ಯನ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಇಲ್ಲಿಂದ ಸುಮಾರು ಒಂದೂವರೆ ತಿಂಗಳ ಕಾಲ ಅನೇಕರು ಉಪವಾಸ ಮಾಡುತ್ತಾರೆ. ಕೆಲವು ಮನೆಗಳಲ್ಲಿ ರೊಟ್ಟಿ ಮಾಡುವುದಿಲ್ಲ, ಮಾಂಸಹಾರ ಊಟ ಮಾಡುವುದಿಲ್ಲ, ಖಾರ ಕುಟ್ಟಿಸುವುದು ಸೇರಿದಂತೆ ಕೆಲವೊಂದಿಷ್ಟು ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!