ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ ಅಭ್ಯರ್ಥಿ

196

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಸೋಮವಾರ ಪ್ರಣಾಳಿಕೆ ಬಿಡುಗಡೆ ಮಾಡಿದರು. ಪಟ್ಟಣದ ಬಸವೇಶ್ವರ ಸರ್ಕಲ್ ಹತ್ತಿರ ನೂತನ ಕಾರ್ಯಾಲಯ ಉದ್ಘಾಟನೆ ಮಾಡಿದ ಬಳಿಕ ತಾಲೂಕಿಗೆ ಸಂಬಂಧಿಸಿದಂತೆ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಕಡಗಿ ಗ್ರಾಮದ ಹತ್ತಿರ ಇರುವ ಭೀಮಾ ನದಿಗೆ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ, ಪಟ್ಟಣದಲ್ಲಿ ನೂತನ ಮಾರುಕಟ್ಟೆ, ಆಲಮೇಲದಲ್ಲಿ ನೂತನ ಮಿನಿ ವಿಧಾನಸೌಧ, ಪಟ್ಟಣದಲ್ಲಿ ನೂತನ ತಾಲೂಕು ಪಂಚಾಯ್ತಿ ಕಟ್ಟಡ ನಿರ್ಮಾಣ, ಸಿಂದಗಿ ಪುರಸಭೆಯನ್ನು ನಗರಸಭೆನ್ನಾಗಿಸುವುದು, ಆರ್ ಟಿಒ ಕಚೇರಿ ಸ್ಥಾಪನೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಉದ್ಯಾನವನ ಹಾಗೂ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳ ಪ್ರಣಾಳಿಕೆ ಬಿಡುಗಡೆ ಮಾಡಿದರು.

ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ಪ್ರಣಾಳಿಕೆ ಓದಿದರು. ಶಾಸಕರಾಗಿ ಆಯ್ಕೆ ಆಗಿ ಬಂದ ಮೇಲೆ ಪ್ರಣಾಳಿಕೆಯಲ್ಲಿರುವ ಆಶ್ವಾಸನೆಗಳನ್ನು ಈಡೇರಿಸಲಾಗುವುದು ಎಂದು ಅಭ್ಯರ್ಥಿ ರಮೇಶ ಭೂಸನೂರ ಹೇಳಿದರು.

ಈ ವೇಳೆ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಮಹಿಳಾ ಘಟಕದ ಅಧ್ಯಕ್ಷ ನೀಲಾ ಯಡ್ರಾಮಿ, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ಸಾಲಕ್ಕಿ, ಯಶವಂತರಾಯಗೌಡ ರೂಗಿ, ಬಿ.ಎ.ಚ್ ಬಿರಾದಾರ, ಬಿ.ಆರ್ ಯಂಟಮಾನ, ಡಾ.ಅನಿಲ ನಾಯ್ಕ, ಬಸವರಾಜ ಹೂಗಾರ, ಹಣಮಂತ ನಾಗೂರ, ರಾಜು ಪೂಜಾರ, ಅನಂತ ದೇವರೆಡ್ಡಿ, ಗುರು ತಳವಾರ, ಶಿವಕುಮಾರ ಬಿರಾದಾರ ಸೇರಿ ಅನೇಕರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!