ಸಿಂದಗಿ 2ನೇ ಜಾನಪದ ಸಮ್ಮೇಳನಾಧ್ಯಕ್ಷರಾಗಿ ಲಕ್ಷ್ಮಿಬಾಯಿ ಆಯ್ಕೆ

175

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಸಿಂದಗಿ: ತಾಲೂಕಿನ ಯಂಕಂಚಿ ಗ್ರಾಮದಲ್ಲಿ ನಡೆಯಲಿರುವ 2ನೇ ಜಾನಪದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಲಕ್ಷ್ಮಿಬಾಯಿ ಪಂಚಯ್ಯ ಗುಬ್ಬೆವಾಡ ಆಯ್ಕೆ ಆಗಿದ್ದಾರೆ. ಯರಗಲ್ಲ್ ಬಿ.ಕೆ ಗ್ರಾಮದ ಲಕ್ಷ್ಮಿಬಾಯಿ ಅವರನ್ನು ಜಾನಪದ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಪಂಡಿತ ಅವಜಿ ತಿಳಿಸಿದ್ದಾರೆ.

ಯಂಕಂಚಿ ಗ್ರಾಮದ ಷ.ಬ್ರ ಅಭಿನವ ರುದ್ರಮುನಿ ಶಿವಾಚಾರ್ಯರ ಮಠದಲ್ಲಿ ಡಿಸೆಂಬರ್ 1 ರಂದು ಸಮ್ಮೇಳನ ನಡೆಯಲಿದೆ. ಈ ವೇಳೆ ವಿವಿಧ ಕಲಾತಂಡಗಳ ಭವ್ಯ ಮೆರವಣಿಗೆ ನಡೆಯಲಿದೆ ಎಂದು ತಿಳಿಸಲಾಗಿದೆ.

ಈ ವೇಳೆ ಕನ್ನಡ ಜಾನಪದ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಸುನಂದಾ ಯಂಪೂರೆ, ಗುರು ರಾಜುಗೌಡ ಬಿರಾದಾರ, ಭಾರತಿ ಪ್ರಭಾಕರ, ನೀಲಮ್ಮ ಯಡ್ರಾಮಿ, ಶೈಲಾಜಾ ಸ್ಥಾವರಮಠ, ಗುರುನಾಥ ಅರಳಗುಂಡಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಗೀರಿಶ ಗತ್ತಾಟಿ, ಸಿದ್ದಲಿಂಗಯ್ಯ ಹಳ್ಳಿಮಠ, ಪಂಚಯ್ಯ ಗುಬ್ಬೇವಾಡ, ಅಶೋಕ ಕೋಣಸಿರಸಗಿ, ಕಾಳಪ್ಪ ಅಗಸರ, ಬಸವರಾಜ ಬಿರಾದಾರ, ಆಯುಬ್ ದುದನಿ ಉಪಸ್ಥಿತರಿದ್ದರು.
Leave a Reply

Your email address will not be published. Required fields are marked *

error: Content is protected !!