ಲೈಂಗಿಕ ಕಿರುಕುಳ ಪ್ರಕರಣ: ಕ್ರಿಕೆಟಿಗ ಧನುಷ್ಕಗೆ ಜಾಮೀನು

180

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟಿ-20 ವರ್ಲ್ಡ್ ಕಪ್ ಟೂರ್ನಿ ಹಿನ್ನೆಲೆ ಆಸ್ಟ್ರೇಲಿಯಾಗೆ ತೆರಳಿದ್ದ ಶ್ರೀಲಂಕಾ ಕ್ರಿಕೆಟ್ ಆಟಗಾರ ಧನುಷ್ಕ ಗುಣತಿಲಕ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಾಗಿದೆ. 11 ದಿನಗಳ ಜೈಲು ವಾಸದ ಬಳಿಕ ಜಾಮೀನು ನೀಡಲಾಗಿದೆ.

ಧನುಷ್ಕಗೆ ಜಾಮೀನು ನೀಡಲು ಸೆಂಟ್ರಲ್ ಕೋರ್ಟ್ ನಿರಾಕರಿಸಿತ್ತು. ಹೀಗಾಗಿ ನ್ಯೂ ಸೌತ್ ವೇಲ್ಸ್ ನಲ್ಲಿರುವ ಸುಪ್ರಿಂ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 1 ಕೋಟಿ ರೂಪಾಯಿ ಶ್ಯೂರಿಟಿ ಪಡೆದು ಜಾಮೀನು ಮಂಜೂರು ಮಾಡಲಾಗಿದೆ.

ಇನ್ನು ರಾತ್ರಿ 9ಗಂಟೆಯಿಂದ ಬೆಳಗ್ಗೆ 6ಗಂಟೆಯ ತನಕ ಹೊರಗೆ ಓಡಾಡಬಾರದು. ಪ್ರತಿದಿನ ಸ್ಟೇಷನ್ ಗೆ ಹೋಗಿ ಸಹಿ ಹಾಕಬೇಕು. ದೂರು ನೀಡಿರುವ ಯುವತಿಗೆ ಸಂಪರ್ಕಿಸಬಾರದು. ಟಿಂಡರ್ ಹಾಗೂ ಇತರೆ ಡೇಟಿಂಗ್ ಆಪ್ ಬಳಸಬಾರದು.

ವಿಶ್ವಕಪ್ ಟೂರ್ನಿಗೂ ಮೊದಲು ಡೇಟಿಂಗ್ ಆಪ್ ಮೂಲಕ ಆಸ್ಟ್ರೇಲಿಯಾದ ಯುವತಿಯ ಪರಿಚಯವಾಗಿತ್ತು. ನಂತರ ನವೆಂಬರ್ 2ರಂದು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ ಎಂದು 29 ವರ್ಷದ ಯುವತಿ ದೂರು ನೀಡಿದಳು. ನಂತರ ಸಿಡ್ನಿಯ ಹೋಟೆಲ್ ನಲ್ಲಿ ಪೊಲೀಸರು ಬಂಧಿಸಿದರು.




Leave a Reply

Your email address will not be published. Required fields are marked *

error: Content is protected !!