ಸಿನಿಮಾ ಸಂಸ್ಥೆ ಶುರು ಮಾಡಿದ ಧೋನಿ

160

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ, ಸಿನಿಮಾ ಜಗತ್ತಿಗೆ ಎಂಟ್ರಿ ಕೊಟ್ಟಿರುವುದು ಎಲ್ಲರಿಗೂ ಗೊತ್ತಿದೆ. ಯಶಸ್ವಿ ನಾಯಕ ಎನಿಸಿಕೊಂಡಿರುವ ಧೋನಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, ಧೋನಿ ಎಂಟರ್ಟೈನ್ ಮೆಂಟ್ ಎಂದು ಸಂಸ್ಥೆಗೆ ನಾಮಕರಣ ಮಾಡಿದ್ದಾರೆ.

ಕ್ಯಾಮೆರಾ ಹಾಗೂ ಕ್ರಿಕೆಟ್ ಬೌಲ್ ಡೈಸನ್ ಹೊಂದಿರುವ ಲೋಗೋವನ್ನು ಈ ಸಂಸ್ಥೆ ಹೊಂದಿದೆ. ನಿರ್ದೇಶಕ ರಮೇಶ್ ತಮಿಳುಮಣಿ, ಧೋನಿ ಎಂಟರ್ಟೈನ್ ಮೆಂಟ್ ಸಂಸ್ಥೆಯ ಮೊದಲ ಚಿತ್ರದ ಮೊದಲ ನಿರ್ದೇಶಕರಾಗಿದ್ದಾರೆ. ನಟ ಹರೀಶ್ ಕಲ್ಯಾಣ್ ಹಾಗೂ ನಟಿ ಪ್ರಿಯಾಂಕ್ ಅರುಳ್ ಮೋಹನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.




Leave a Reply

Your email address will not be published. Required fields are marked *

error: Content is protected !!