ಆ ಒಂದು ಕಾರಣಕ್ಕೆ ಪ್ರಾಂಶುಪಾಲರನ್ನೇ ಹತ್ಯೆ ಮಾಡಿದ ವಿದ್ಯಾರ್ಥಿ

198

ಪ್ರಜಾಸ್ತ್ರ ಅಪರಾಧ ಸುದ್ದಿ

ಮಧ್ಯಪ್ರದೇಶ: ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಭಯಾನಕ ಘಟನೆ ಇಂದೋರ್ ನಲ್ಲಿ ನಡೆದಿದೆ. ಬಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲೆ ವಿಮುಕ್ತ ಶರ್ಮಾ ಕೊಲೆಯಾದ ದುರ್ದೈವಿ. ಅಶುತೋಷ್ ಶ್ರೀವಾಸ್ತವ(24) ಕೊಲೆ ಮಾಡಿದ ಮಾಜಿ ವಿದ್ಯಾರ್ಥಿ.

ಫೆಬ್ರವರಿ 20ರಂದು ಈ ಘಟನೆ ನಡೆದಿದೆ. ಶೇಕಡ 90ರಷ್ಟು ಸುಟ್ಟ ಗಾಯಗಳಾಗಿದ್ದ ವಿಮುಕ್ತ ಶರ್ಮಾ ಶನಿವಾರ ಮೃತಪಟ್ಟಿದ್ದಾರೆ. ಈ ಕುರಿತು ಸಹೋದರ ಅರವಿಂದ್ ತಿವಾರಿ ತಿಳಿಸಿದ್ದಾರೆ. ಈ ಘಟನೆ ಸಂಬಂಧ ಕರ್ತವ್ಯ ನಿರ್ಲಕ್ಷ್ಯದ ಮೇಲೆ ಇಂದೋರ್ ಸಹಾಯಕ ಸಬ್ ಇನ್ಸ್ ಪೆಕ್ಟರ್ ರನ್ನು ಅಮಾನತುಗೊಳಿಸಲಾಗಿದೆ.

ಇಷ್ಟಕ್ಕೂ ಅಶುತೋಷ್ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿದಿದ್ದು ಮಾರ್ಕ್ಸ್ ಕಾರ್ಡ್ ಕೊಡಲು ವಿಳಂಬ ಮಾಡಿದರು ಅನ್ನೋದು. ಈ ಘಟನೆಯಿಂದಾಗಿ ಶಿಕ್ಷಕರ ವಲಯದಲ್ಲಿಯೇ ಆತಂಕ ನಿರ್ಮಾಣವಾಗಿದೆ. ಶ್ರೀವಾಸ್ತವ ವಿರುದ್ಧ ಫಾರ್ಮಸಿ ಕಾಲೇಜು ಅಧಿಕಾರಿಗಳು, ಸಿಬ್ಬಂದಿ ಆತ್ಮಹತ್ಯೆ ಬೆದರಿಕೆ ಹಾಕುತ್ತಿದ್ದನಂತೆ. ಈ ಕುರಿತು ಎರಡ್ಮೂರು ದೂರುಗಳನ್ನು ನೀಡಲಾಗಿದೆಯಂತೆ. ಆದರೆ, ಈ ಬಗ್ಗೆ ಪೊಲೀಸರು ಗಂಭೀರವಾಗಿ ತೆಗೆದುಕೊಳ್ಳದ ಪರಿಣಾಮ ಓರ್ವ ಪ್ರಾಂಶುಪಾಲರ ಪ್ರಾಣವೇ ಹೋಗಿದೆ.

7ನೇ ಸೆಮಿಸ್ಟರ್ ನಲ್ಲಿ ಫೇಲ್ ಆಗಿದ್ದ ಶ್ರೀವಾಸ್ತವ 2022 ಜುಲೈನಲ್ಲಿ ಪರೀಕ್ಷೆ ಬರೆದಿದ್ದಾನೆ. ಸಾಕಷ್ಟು ಅಪರಾಧಿ ಹಿನ್ನೆಲೆಯುಳ್ಳ ಇತ ಕಾಲೇಜಿನ ನಿಯಮಗಳ ಹೊರತಾಗಿಯೂ ಅಂಕಪಟ್ಟಿ ತೆಗೆದುಕೊಳ್ಳಲು ಬಂದಿಲ್ಲ ಅನ್ನೋದು ಒಂದು ಕಡೆಯಾದರೆ, ಸಾಕಷ್ಟು ಮನವಿ ಮಾಡಿದರೂ ಅಂಕಪಟ್ಟಿ ಕೊಟ್ಟಿಲ್ಲ ಅನ್ನೋದು ಆರೋಪಿಯ ಮಾತು. ಇದೀಗ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಆರೋಪಿ ಅಷುತೋಷ್ ಶ್ರೀವಾಸ್ತವನನ್ನು ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!