ವಿದ್ಯಾರ್ಥಿಗಳು ಟಿವಿ, ಮೊಬೈಲ್ ದಾಸರಾಗಬಾರದು: ಉಪನ್ಯಾಸಕ ಶಶಿಧರ ಅವಟಿ

401

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಮನೆಯೇ ಮಕ್ಕಳಿಗೆ ಮೊದಲ ಪಾಠಶಾಲೆಯಾಗಿದ್ದು, ಅವರಿಗೆ ತಾಯಿಯೇ ಮೊದಲ ಗುರು. ಮನೆಯಿಂದಲೇ ಮಕ್ಕಳಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ಬೆಳೆಸಿದಾಗ ಮಾತ್ರ ಅವರಿಂದ ನಾವು ಭವ್ಯ ಭಾರತ ಕಾಣಲು ಸಾಧ್ಯ ಎಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶಶಿಧರ ಅವಟಿ ಹೇಳಿದರು.

ಪದ್ಮರಾಜ ಮಹಿಳಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಪೋಷಕರು ಮುಂದಾಗಬೇಕು. ಟಿವಿ ಮತ್ತು ಮೊಬೈಲ್ ಹಾವಳಿಯಿಂದ ಮಕ್ಕಳಲ್ಲಿ ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗುತ್ತಿದೆ. ಅವರಿಗೆ ಬುದ್ದಿ ಹೇಳಿ ಓದಿನ ಕಡೆ ಹೆಚ್ಚಿನ ಗಮನ ಕೊಡುವಂತೆ ಹೇಳಬೇಕು ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಜಿ ಮಠ ಮಾತನಾಡಿ, ಕಾಲೇಜಿನ ಹಂತದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಓದಿನ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಎಮ್.ಪೂಜಾರಿ ಮಾತನಾಡಿದರು. ಸಾನಿಧ್ಯ ವಹಿಸಿದ್ದ ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಇದೇ ವೇಳೆ ಪ್ರಸಕ್ತ ಸಾಲಿನ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯವು ಕೊಡ ಮಾಡುವ 10 ರ್ಯಾಂಕ್ ಗಳಲ್ಲಿ ಚಿನ್ನದ ಪದಕದೊಂದಿಗೆ 3 ರ್ಯಾಂಕ್ ಪಡೆದಿರುವ ವಿದ್ಯಾರ್ಥಿಗಳಿಗೆ ಹಾಗೂ ವಿಶ್ವವಿದ್ಯಾನಿಲಯ ಬ್ಲೂ ಆಗಿ ಆಯ್ಕೆಯಾದವರಿಗೆ ಸನ್ಮಾನಿಸಲಾಯಿತು.

ಪದ್ಮರಾಜ ಬಿ.ಎಡ್ ಕಾಲೇಜಿನ ಕಾಲೇಜಿನ ಉಪನ್ಯಾಸಕರಾದ ಗದಗಯ್ಯ ನಂದಿಮಠ, ಗಿರೀಶ್ ಕುಲಕರ್ಣಿ, ಉಮೇಶ ಪೂಜಾರ, ಮಹಾಂತೇಶ ನುಲಾನವರ, ಪ್ರಭಾವತಿ ಮಾಲಿಪಾಟೀಲ, ಶ್ರುತಿ ಹೂಗಾರ, ಲಕ್ಷ್ಮಿ ಕೆಸರಗೊಪ್ಪ, ಸರಸ್ವತಿ.ಜಿ, ಮೂರ್ತುಜಬಿಬೇಗಂ ಬಿರಾದಾರ, ಪ್ರಿಯಾಂಕ ಬ್ಯಾಕೊಡ, ಮಂಗಳಾ ಈಳಗೇರ ಹೇಮಾ ಹಿರೇಮಠ, ವರ್ಷಾ ಪಾಟೀಲ, ಲಕ್ಷ್ಮಿ ಗೋಗಿ, ಮಮತಾ ಹರನಾಳ, ಲಕ್ಷ್ಮಿ ಭಜಂತ್ರಿ, ಗೌಡಪ್ಪಗೌಡ ಪಾಟೀಲ, ಸತೀಶ ಕಕ್ಕಸಗೇರಿ ಶಿವಶಂಕರ ಕುಂಬಾರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ಜಿ.ಎ ನಂದಿಮಠ ಸ್ವಾಗತಿಸಿದರು. ಸಹನಾ ಹಿರೋಳ್ಳಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಅಕ್ಷತಾ ಹಿರೇಮಠ ಮತ್ತು ಭವಾನಿ ಹುಣಸಗಿ ನಿರೂಪಿಸಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಸರಸ್ವತಿ.ಜಿ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಧಾನ ಕಾರ್ಯದರ್ಶಿ ವಿದ್ಯಾಶ್ರೀ ನಿಗಡಿ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!