ಕಿಚ್ಚನಿಗೆ ದುಬೈ ಗೋಲ್ಡನ್ ವೀಸಾ

288

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರಿಗೆ ದುಬೈನಲ್ಲಿ ಗೋಲ್ಡನ್ ವೀಸಾ ನೀಡಲಾಗಿದೆ. ಇದರೊಂದಿಗೆ ಗೋಲ್ಡನ್ ವೀಸಾ ಪಡೆದ ಮೊದಲ ಕನ್ನಡಿಗ ನಟನಾಗಿದ್ದಾರೆ. ಇದು10 ವರ್ಷಗಳ ಅವಧಿ ಹೊಂದಿದೆ.

ಸುದೀಪ್ ಇನ್ನು ಮುಂದೆ ಬಯಸಿದಾಗ ದುಬೈ ಹಾಗೂ ಯುಎಇಯ ಇತರ ಆರು ಎಮಿರೇಟ್ಸ್ ಗಳಿಗೆ ಭೇಟಿ ನೀಡಬಹುದು. ಅಲ್ಲದೇ ಅಲ್ಲಿನ ಆರ್ಥಿಕತೆಗೆ ಕೊಡುಗೆ ನೀಡಬಹುದಾಗಿದೆ. ಪ್ರಸಿದ್ಧ ವ್ಯಕ್ತಿಗಳು, ಉದ್ಯಮಿಗಳು, ಗಣ್ಯಾತಿಗಣ್ಯರಿಗೆ ಗೋಲ್ಡನ್ ವೀಸಾ ನೀಡಲಾಗುತ್ತಿದೆ.

ಬಾಲಿವುಡ್ ನ ಶಾರೂಖ್ ಖಾನ್, ಸಂಜಯ್ ದತ್, ರಣವೀರ್ ಸಿಂಗ್, ಸುನೀಲ್ ಶೆಟ್ಟಿ, ಸೋನು ನಿಗಮ್, ಮಾಲಿವುಡ್ ನ ಮೋಹನ್ ಲಾಲ್, ಮುಮ್ಮುಟ್ಟಿ ಗೋಲ್ಡನ್ ವೀಸಾ ಪಡೆದಿದ್ದು, ಸುದೀಪ್ ಕನ್ನಡದ ಮೊದಲ ನಟನಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!