ಭಾರತ-ನ್ಯೂಜಿಲೆಂಡ್ ಹಣಾಹಣಿ: ಈ ಪಿಚ್ ಇಂಡಿಯಾಗೆ ಅನ್ ಲಕ್ಕಿ

150

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದು, ಟಿ-20 ಸರಣಿಯ ಬಳಿಕ ಏಕದಿನ ಸರಣಿ ಆಡುತ್ತಿದೆ. ಮೊದಲ ಪಂದ್ಯ ಸೋತಿರುವ ಭಾರತಕ್ಕೆ ಭಾನುವಾರದ ಪಂದ್ಯ ಮಹತ್ವದ್ದಾಗಿದೆ. ಆದರೆ, ಹ್ಯಾಮಿಲ್ಟನ್ ಸೆಡನ್ ಪಾರ್ಕ್ ಭಾರತಕ್ಕೆ ಅನ್ ಲಕ್ಕಿ ಎಂದು ಹೇಳಲಾಗುತ್ತೆ.

ಈ ಮೈದಾನದಲ್ಲಿ ಭಾರತ ಇದುವರೆಗೂ 7 ಪಂದ್ಯಗಳನ್ನು ನ್ಯೂಜಿಲೆಂಡ್ ವಿರುದ್ಧ ಆಡಿದ್ದು, 1ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇನ್ನು ಜಿಂಬಾಬ್ವೆ ಹಾಗೂ ಐರ್ಲಾಂಡ್ ವಿರುದ್ಧ ಆಡಿದ ಪಂದ್ಯದಲ್ಲಿ ಗೆಲ್ಲುವ ಮೂಲಕ 11ರಲ್ಲಿ 3 ಪಂದ್ಯ ಗೆದ್ದಿದೆ.

ಮೊದಲ ಪಂದ್ಯದಲ್ಲಿ 306 ರನ್ ಗಳ ಉತ್ತಮ ಸ್ಕೋರ್ ಗಳಿಸಿದ್ದರೂ ಭಾರತ ಸೋಲು ಅನುಭವಿಸಬೇಕಾಯಿತು. ವಿಕೆಟ್ ಕೀಪರ್ ಟಾಮ್ ಲಥಿಮ್ ಅಜೇಯ 145, ನಾಯಕ ಕೇನ್ ವಿಲಿಯಮ್ಸನ್ ಅಜೇಯ 94 ರನ್ ಗಳ ಆಟದಿಂದಾಗಿ ಮೊದಲ ಪಂದ್ಯ ಸೋತಿದೆ. ಹೀಗಾಗಿ ನಾಳೆಯ ಪಂದ್ಯ ಗೆದ್ದರೆ 3ನೇ ಪಂದ್ಯಕ್ಕೆ ಜೀವ ಬರಲಿದೆ.




Leave a Reply

Your email address will not be published. Required fields are marked *

error: Content is protected !!