ಕೇರಳ ಹೈಕೋರ್ಟ್ ಕದ ತಟ್ಟಿದ ಸನ್ನಿ ಲಿಯೋನ್

213

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ನಟಿ ಸನ್ನಿ ಲಿಯೋನ್ ಕೇರಳ ಹೈಕೋರ್ಟ್ ಕದ ತಟ್ಟಿದ್ದಾರೆ. ವಂಚನೆ ಪ್ರಕರಣದಲ್ಲಿ ತಮ್ಮ ಹೆಸರು, ಪತಿಯ ಹೆಸರು ಹಾಗೂ ಉದ್ಯೋಗಿಯೊಬ್ಬರ ಹೆಸರಿನಲ್ಲಿ ದೂರು ದಾಖಲಿಸಲಾಗಿದೆ. ಈ ವಂಚನೆ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಈವೆಂಟ್ ನಲ್ಲಿ ಭಾಗವಹಿಸಲು ನಟಿ ಸನ್ನಿ ಲಿಯೋನ್ ಲಕ್ಷಾಂತರ ರೂಪಾಯಿ ಪಡೆದಿದ್ದರು. ಆದರೆ, ಕಾರ್ಯಕ್ರಮದಲ್ಲಿ ಭಾಗವಹಿಸದೆ ವಂಚನೆ ಮಾಡಿದ್ದಾರೆ ಎಂದು, ಎರ್ನಾಕುಲಂ ಮೂಲದ ಈವೆಂಟ್ ಮ್ಯಾನೇಜರ್ ಶಿಯಾಸ್ ಕುಂಜುಮೊಹಮ್ಮದ್ ಎಂಬುವರು ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಸನ್ನಿ ಲಿಯೋನ್, ಇವರ ಪತಿ ಡೇನಿಯಲ್ ವೆಬರ್ ಹಾಗೂ ಅವರ ಉದ್ಯೋಗಿಯೊಬ್ಬರ ಹೆಸರು ಸೇರಿಸಲಾಗಿದೆ. ಆದರೆ, ಇದಕ್ಕೆ ಯಾವುದೇ ಸಾಕ್ಷಾಧಾರಗಳು ಇಲ್ಲ. ನಾವು ಇದರಲ್ಲಿ ನಿರಾಪರಾಧಿಗಳು. ಜುಲೈ 2022ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಸಾಕ್ಷಾಧಾರದ ಕೊರತೆಯಿಂದ ವಜಾಗೊಳಿಸಿದೆ. ಹೀಗಾಗಿ ತಮ್ಮ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!