ಇಂಗ್ಲೆಂಡ್ ಟಿ-20 ಚಾಂಪಿಯನ್ಸ್

145

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ-20 ವರ್ಲ್ಡ್ ಕಪ್ ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ ಇಂಗ್ಲೆಂಡ್ 5 ವಿಕೆಟ್ ಅಂತರದಿಂದ ಗೆಲ್ಲುವ ಮೂಲಕ ಚಾಂಪಿಯನ್ಸ್ ಪಟ್ಟವನ್ನು ಮುಡಿಗೇರಿಸಿಕೊಂಡಿತು. 19 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 138 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಬೆನ್ ಸ್ಟೋಕ್ ಜವಾಬ್ದಾರಿಯುತ ಅಜೇಯ 52 ರನ್ ಗಳ ಆಟದಿಂದಾಗಿ ಗೆಲುವು ಸಾಧಿಸಿತು. ನಾಯಕ ಬಟ್ಲರ್ 26, ಬ್ರೋಕ್ 20, ಮೋಹಿನ್ ಅಲಿ 19 ರನ್ ಗಳಿಸಿದರು. ಪಾಕ್ ಪರ ರೌಫ್ 2, ಅಫ್ರಿದಿ, ಶದಬ್ ಖಾನ್, ವಾಸೀಂ ತಲಾ 1 ವಿಕೆಟ್ ಪಡೆದರು.

3 ವಿಕೆಟ್ ಪಡೆದ ಶ್ಯಾಮ್ ಕರನ್

ಶಾಹೀನ್ ಅಫ್ರಿದಿ ತನ್ನ 3ನೇ ಓವರ್ ಮೊದಲ ಬೌಲ್ ಮಾಡಿದ ನಂತರ ಗಾಯಗೊಂಡ ಪರಿಣಾಮ ಹೊರ ನಡೆದ. ಆಗ ಇಫ್ತಾಕರ್ ಅಹ್ಮದ್ ಉಳಿದ 5 ಬೌಲ್ ಗಳನ್ನು ಮಾಡಿ 13 ರನ್ ನೀಡಿದ್ದು ಪಾಕ್ ಗೆ ದುಬಾರಿ ಆಯಿತು. ಗೆಲುವು ಪಾಕ್ ಕಡೆ ಇದೆ ಎಂದುಕೊಂಡು ಟೀಂ, ಅಭಿಮಾನಿಗಳು ಖುಷಿಯಲ್ಲಿ ಇರುವಾಗ ಇಫ್ತಾಕರ್ ಬೌಲಿಂಗ್ ನಲ್ಲಿ ಮೋಹಿನ್ ಅಲಿ 1 ಸಿಕ್ಸ್, 2 ಫೋರ್ ಬಾರಿಸುವ ಮೂಲಕ ಪಂದ್ಯ ಟರ್ನ್ ತೆಗೆದುಕೊಂಡಿತು. ಇನ್ನೊಂದು ಬದಿಯಲ್ಲಿ ಭದ್ರವಾಗಿ ನಿಂತಿದ್ದ ಸ್ಟೋಕ್ ತಂಡವನ್ನು ಗೆಲುವಿನ ದಡ ಸೇರಿಸಿದ.

ಟೂರ್ನಿಯಲ್ಲಿ 13 ವಿಕೆಟ್ ಪಡೆದ ಇಂಗ್ಲೆಂಡ್ ನ ಶ್ಯಾಮ್ ಕರನ್ ಪ್ಲೇಯರ್ ಆಫ್ ದಿ ಟೂರ್ನಿ ಆದರು. ಅಲ್ಲದೆ ಫೈನಲ್ ಪಂದ್ಯದಲ್ಲಿ 4 ಓವರ್ ನಲ್ಲಿ 12 ರನ್ ನೀಡಿ 3 ವಿಕೆಟ್ ಪಡೆದ ಪರಿಣಾಮ ಪ್ಲೇಯರ್ ಆಫ್ ದಿ ಮ್ಯಾಚ್ ಸಹ ಶ್ಯಾಮ್ ಕರನ್ ಆದರು.




Leave a Reply

Your email address will not be published. Required fields are marked *

error: Content is protected !!