ಪ್ರಜಾಸ್ತ್ರ ಕ್ರೀಡಾ ಸುದ್ದಿ
ಐಸಿಸಿ ಟಿ-20 ವರ್ಲ್ಡ್ ಕಪ್ ನ ಮೊದಲ ಸೆಮಿ ಫೈನಲ್ ಪಂದ್ಯ ಬುಧವಾರ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವೆ ನಡೆಯಲಿದೆ. ಸೌಥ್ ಆಫ್ರಿಕಾ ತಂಡ ನೆದರ್ಲ್ಯಾಂಡ್ ವಿರುದ್ಧ ಸೋತ ಪರಿಣಾಮ ಪಾಕ್ ಸೆಮಿಗೆ ಎಂಟ್ರಿ ಪಡೆಯಿತು.
ವಿಲಿಯಮ್ಸನ್ ಹಾಗೂ ಬಾಬರ್ ಅಜಂ ತಂಡದ ನಡುವೆ ಮಧ್ಯಾಹ್ನ 1.30ಕ್ಕೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಹಣಾಹಣಿ ನಡೆಯಲಿದೆ. ಗೆಲುವಿನ ನೆಚ್ಚಿನ ತಂಡದಲ್ಲಿ ನ್ಯೂಜಿಲೆಂಡ್ ಇದೆ. ಪಾಕ್ ತಂಡವನ್ನು ಕಡೆಗಣಿಸುವಂತಿಲ್ಲ.