ಥಿಯೇಟರ್ ಗೆ ಟಗರು ರೀ ಎಂಟ್ರಿ!

304

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಮೂರು ವರ್ಷಗಳ ಹಿಂದೆ ಸ್ಯಾಂಡಲ್ ವುಡ್ ಧೂಳೆಬ್ಬಿಸಿದ್ದ ಟಗರು ಚಿತ್ರ ಶುಕ್ರವಾರ ಮತ್ತೆ ಬಿಡುಗಡೆಯಾಗುತ್ತಿದೆ. ಶಿವರಾಜಕುಮಾರ ನಟನೆಯ ಟಗರು ಚಿತ್ರವನ್ನು ಮರು ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ.

ನಟ ಧನಂಜಯಗೆ ಡಾಲಿ ಅನ್ನೋ ಪಾತ್ರ ಬಹುದೊಡ್ಡ ಸಕ್ಸಸ್ ನೀಡಿತು. ಆ ಮೂಲಕವೇ ಅವರು ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ರು. ತೆಲುಗು ಚಿತ್ರರಂಗದ ಬಿಗ್ ಬಜೆಟ್ ಸಿನಿಮಾಗೂ ಕಾಲಿಟ್ಟಿದ್ದಾರೆ. ಇನ್ನು ವಸಿಷ್ಠ ಸಿಂಹ, ನಟಿಯರಾದ ಭಾವನಾ, ಮನ್ವಿತಾ ಕಾಮತ್ ಕಾಣಿಸಿಕೊಂಡಿದ್ದಾರೆ. ರೇಡಿಯೋ ಜಾಕಿ ಆಗಿದ್ದ ಮನ್ವಿತಾ ಚಂದನವನದ ನಟಿಯಾಗಿ ಮಿಂಚಿದ್ರು.

ಶಿವಣ್ಣ ಹಾಗೂ ನಿರ್ದೇಶಕ ಸೂರಿ ಜೋಡಿಯ ಕಡ್ಡಿಪುಡಿ ಚಿತ್ರ ಅಷ್ಟೊಂದು ಸಕ್ಸಸ್ ನೀಡಲಿಲ್ಲ. ಆದರೆ, ಟಗರು ಈ ಜೋಡಿಯ ಎರಡನೇ ಸಿನಿಮಾವಾಗಿದ್ದು ಸೂಪರ್ ಹಿಟ್ ಆಯ್ತು. ಅಂಡರ್ ವರ್ಲ್ಡ್ ದುನಿಯಾದ ಕಥೆಯನ್ನು ಹೇಳುವುದರಲ್ಲಿ ಸುಕ್ಕಾ ಸೂರಿ ಎತ್ತಿದ ಕೈ.




Leave a Reply

Your email address will not be published. Required fields are marked *

error: Content is protected !!