‘ನಿರ್ದೇಶಕ ಒಬ್ಬ ಸೆಟ್ ಬಾಯ್ ಆಗಿದ್ದವನು ಕಣೋ ಕಂದ’

76

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯ ಎಂದು ಡಾಲಿ ಧನಂಜಯ್ ಹೇಳಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತು. ಜೊತೆಗೆ ಒಂದಿಷ್ಟು ಜನರ ಕಣ್ಣು ಕೆಂಪಾಗಿಸಿತು. ಹೆಡ್ ಬುಷ್ ಬಳಿಕ ಡಾಲಿ ಪಿಚ್ಚರ್ಸ್ ಅಡಿಯಲ್ಲಿ ‘ಟಗರು ಪಲ್ಯ’ ಅನ್ನೋ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಕೆಲವರು ನೆಪೋಟಿಸಂ ಎಂದು ಟೀಕಿಸಿದ್ದಾರೆ.

ಟಗರು ಪಲ್ಯ ಚಿತ್ರದಲ್ಲಿ ನಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿದ್ದಾರೆ. ಬಡವರು ಮಕ್ಕಳು ಬೆಳೀಬೇಕು ಕಣ್ರಯ್ಯ ಎಂದು, ಈಗ ನಟನ ಪುತ್ರಿಗೆ ಅವಕಾಶ ನೀಡಿದ್ದಕ್ಕೆ ಟೀಕಿಸುತ್ತಿದ್ದಾರೆ. ಇದಕ್ಕೆ ಅವರದೆ ಶೈಲಿಯಲ್ಲಿ ಖಡಕ್ ಉತ್ತರ ನೀಡಿರುವ ಡಾಲಿ, ನಿರ್ದೇಶಕ ಒಬ್ಬ ಸೆಟ್ ಬಾಯ್ ಆಗಿದ್ದವನು ಕಣೋ ಕಂದ ಎಂದಿದ್ದಾರೆ.

ನಿರ್ದೇಶಕ ಉಮೇಶ್ ಕೃಪ ಯಾವುದೇ ಸಿನಿಮಾ ಕುಟುಂಬದಿಂದ ಬಂದವನು ಅಲ್ಲ. ಸೆಟ್ ಬಾಯ್ ಆಗಿದ್ದವನು. ಈಗ ನಿರ್ದೇಶಕನಾಗಿ ಎಂಟ್ರಿ ಕೊಡುತ್ತಿದ್ದಾನೆ. ನಾಗಭೂಷಣ್ ಹೀರೋ ಆಗುತ್ತಿದ್ದಾನೆ. ಹೀಗೆ ಅನೇಕರಿಗೆ ಅವಕಾಶ ಸಿಕ್ಕಿದೆ. ಇಲ್ಲಿ ಬರೀ ಪ್ರೇಮ್ ಮಗಳು ನಟಿ ಎಂದುಕೊಂಡು ನೆಪೋಟಿಸಂ ಎಂದು ಹೇಳುವವರು ಎಲ್ಲ ಕೋನದಲ್ಲಿಯೂ ಆಲೋಚಿಸಬೇಕು ಎಂದು ತಿರುಗೇಟು ನೀಡಿದ್ದಾರೆ.
Leave a Reply

Your email address will not be published. Required fields are marked *

error: Content is protected !!