ಬ್ರೇಕಿಂಗ್ ನ್ಯೂಸ್
Search

ಅಮರೇಶ ಕಾಮನಕೇರಿ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

668

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕರ್ನಾಟಕ ರಾಜ್ಯ ಬುಡಕಟ್ಟು ಸಂರಕ್ಷಣಾ ಸಮಿತಿಯ ಅಧ್ಯಕ್ಷ ಹಾಗೂ ತಳವಾರ ಸಮಾಜದ ಹೋರಾಟಗಾರ ಅಮರೇಶ ಕಾಮನಕೇರಿ ಅವರ ಮೇಲಿನ ಹಲ್ಲೆ ಖಂಡಿಸಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ತಳವಾರ ಸಮಾಜದ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಯಾದಗಿರಿ ಜಿಲ್ಲೆಯಲ್ಲಿ ತಳವಾರ ಸಮಾಜಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡದೆ ತೊಂದರೆ ಮಾಡುತ್ತಿರುವ ಅಧಿಕಾರಿಗಳನ್ನು ಕೇಳಲು ಹುಣಚಗಿ ತಹಶೀಲ್ದಾರ್ ಕಚೇರಿಗೆ ಹೋದ ಸಂದರ್ಭದಲ್ಲಿ ಅಮರೇಶ ಕಾಮನಕೇರಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ತನಿಖೆ ನಡೆಸಬೇಕು ಎಂದು ವಿಜಯಪುರ ಜಿಲ್ಲಾ ತಳವಾರ ಪರಿವಾರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶಿವಾಜಿ ಮಟಗಾರ ಆಗ್ರಹಿಸಿದರು.

ಕೇಂದ್ರ ಸರ್ಕಾರ ತಳವಾರ ಸಮಾಜವನ್ನು ಎಸ್ಟಿಗೆ ಸೇರಿಸಿ ರಾಜ್ಯಕ್ಕೆ ಆದೇಶ ಕಳುಹಿಸಿದೆ. ರಾಜ್ಯ ಸರ್ಕಾರ ಅಕ್ಟೋಬರ್ 29ರಂದು ಹಿಂದುಳಿದ ವರ್ಗದಿಂದ ತಳವಾರ ತೆಗೆದು ಎಸ್ಟಿ ಪ್ರಮಾಣಪತ್ರ ನೀಡಲು ಅಧಿಕೃತ  ಆದೇಶ ಹೊರಡಿಸಿದೆ. ಆದರೆ ಯಾದಗಿರಿಯಲ್ಲಿ ಪ್ರಮಾಣಪತ್ರ ನೀಡದೆ ತೊಂದರೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಮತ್ತೆ ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದರು. ಹಾಲುಮತ ಸಮಾಜದ ಮುಖಂಡ ಮಲ್ಲು ಸಾವಳಸಾಂಗ ಮಾತನಾಡಿ, ಅಮರೇಶ ಕಾಮನಕೇರಿ ಅವರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸುತ್ತೇವೆ ಎಂದರು. ನಂತರ ತಹಶೀಲ್ದಾರ್ ನಿಂಗಣ್ಣ ಬಿರಾದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ತಳವಾರ ಸಮಾಜದ ಮುಖಂಡರಾದ ಚಂದ್ರಶೇಖರ ಕೊಟರಗಸ್ತ, ಶಿವಣ್ಣ ಕೊಟರಗಸ್ತಿ, ಅನಿಲ ಕಡಕೋಳ, ಮಲ್ಲಪ್ಪ ಹಿರೋಳ್ಳಿ, ರೈತ ಯುವ ಮುಖಂಡ ಭೀಮಾಶಂಕರ ಪೀರಪ್ಪ, ನಾಗು ತಳವಾರ, ವಿಜಯಕುಮಾರ ಯಾಳವಾರ, ರವಿ ವಾಲೀಕಾರ, ಮಲ್ಲಿಕಾರ್ಜುನ ತಳವಾರ, ರಮೇಶ ಪಾಟೀಲ, ಶಂಕರ ಹಂಚನಾಳ, ಅಣ್ಣಾರಾಯ ವಾಲೀಕಾರ, ಮಡಿವಾಳಪ್ಪ ಮಳಗೇರ, ಪರಶುರಾಮ ಕೊಟರಗಸ್ತಿ, ಶಂಕರಲಿಂಗ ಬೂದಿಹಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!