‘ದಿ ಕೇರಳ ಸ್ಟೋರಿ’ ಚಿತ್ರ ಬಿಡುಗಡೆಯಾದರೆ ಪ್ರತಿಭಟನೆ ಎಚ್ಚರಿಕೆ

223

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸುದೀಪ್ತೋ ಸೇನ್ ನಿರ್ದೇಶನದ ದಿ ಕೇರಳ ಸ್ಟೋರಿ ಚಿತ್ರ ಇದೇ ಮೇ 5ರಂದು ಮಲಯಾಳಂ, ತಮಿಳು, ತೆಲುಗು, ಹಿಂದಿಯಲ್ಲಿ ಬಿಡುಗಡೆಯಾಗುತ್ತಿದೆ. ಆದರೆ, ಆರಂಭದಲ್ಲಿಯೇ ಇದು ವಿವಾದದ ಕಿಡಿ ಹೊತ್ತಿಸಿದೆ. ಈ ಚಿತ್ರ ನಿಷೇಧಿಸುವಂತೆ ಸುಪ್ರೀಂ ಕೋರ್ಟ್ ಗೆ ಹೋಗಲಾಗಿತ್ತು. ಆದರೆ, ಕೋರ್ಟ್ ಇದನ್ನು ನಿರಾಕರಿಸಿತು.

ಈಗಾಗ್ಲೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟಿಯರಾದ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ದಿ ಇದ್ನಾನಿ ಸೇರಿ ದೊಡ್ಡ ತಾರಾ ಬಳಗವಿದೆ. ನಾಲ್ಕು ಯುವತಿಯರು ಕೇರಳ ಹಾಸ್ಟೆಲ್ ನಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಇದರಲ್ಲಿರುವ ಮುಸ್ಲಿಂ ಯುವತಿಯರು ಕೇರಳದ ಹಿಂದೂ ಯುವತಿಯರನ್ನು ಮತಾಂತರಿಸಿ ಉಗ್ರ ಸಂಘಟನೆಗಳಿಗೆ ಸೇರಿಸುತ್ತಾರೆ ಅನ್ನೋದು ಇದೆ.

ಈ ಚಿತ್ರ ಸತ್ಯ ಘಟನೆ ಆಧರಿತವಾಗಿದೆ. ಇದುವರೆಗೂ 32 ಸಾವಿರ ಮಹಿಳೆಯರು ಹೀಗೆ ಮತಾಂತರಗೊಂಡಿದ್ದಾರೆ ಎಂದು ಹೇಳಲಾಗಿದೆ. ವಿಪುಲ್ ಅಮೃತಪಾಲ್ ಶಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಈ ಚಿತ್ರ ರಿಲೀಸ್ ಆದರೆ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.




Leave a Reply

Your email address will not be published. Required fields are marked *

error: Content is protected !!