ನಾಳೆ 37 ದೇಶಗಳಲ್ಲಿ ದಿ ಕೇರಳ ಸ್ಟೋರಿ ಬಿಡುಗಡೆ

230

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸಾಕಷ್ಟು ವಿವಾದಗಳ ನಡುವೆ ತೆರೆ ಕಂಡಿರುವ ದಿ ಕೇರಳ ಸ್ಟೋರಿ ಈಗಾಗ್ಲೇ ಬರೋಬ್ಬರಿ 65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕೆಲವು ರಾಜ್ಯಗಳಲ್ಲಿ ಸಿನಿಮಾ ಬ್ಯಾನ್ ಮಾಡಿದರೆ ಮತ್ತೆ ಕೆಲವು ರಾಜ್ಯಗಳಲ್ಲಿ ಟ್ಯಾಕ್ಸ್ ಫ್ರೀ ಮಾಡಲಾಗಿದೆ.

ಇದೀಗ ಈ ಸಿನಿಮಾ ನಾಳೆ 37 ದೇಶಗಳಲ್ಲಿ ಬಿಡುಗಡೆಯಾಗಲಿದೆ. ಇದಕ್ಕೆ ಚಿತ್ರ ತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಚಿತ್ರದ ಕಥೆ ಬರೋಬ್ಬರಿ 36 ಸಾವಿರ ಹಿಂದು ಹುಡಗಿಯರನ್ನು ಮುಸ್ಲಿಂಗೆ ಮತಾಂತಾರಗೊಳಿಸಿ ಐಸಿಸ್ ಉಗ್ರ ಸಂಘಟನೆಗೆ ರಫ್ತು ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.

ಚಿತ್ರದಲ್ಲಿ ನಟಿಯರಾದ ಆದಾ ಶರ್ಮಾ, ಯೋಗಿತಾ ಬಿಹಾನಿ, ಸಿದ್ದಿ ಇದ್ದಾನಿ ಮತ್ತು ಸೋನಿಯಾ ಬಲಾನಿ ನಟಿಸಿದ್ದಾರೆ. 6 ದಿನದಲ್ಲಿ 65 ಕೋಟಿ ರೂಪಾಯಿ ಗಳಿಸಿದ್ದು, ಮಿಶ್ರ ಪ್ರತಿಕ್ರಿಯೆ ಗಳಿಸಿದೆ.




Leave a Reply

Your email address will not be published. Required fields are marked *

error: Content is protected !!