ಮಹಾ‘ಭಾರತ’ ರಿಸಲ್ಟ್

466

ಕೆಲವೇ ಕ್ಷಣಗಳಲ್ಲಿ ಶುರುವಾಗುತ್ತೆ ಮತ ಎಣಿಕೆ. 8 ಗಂಟೆಗೆ ಮತ ಎಣಿಕೆ ಶುರುವಾಗುತ್ತೆ. ಇಂದು ಮಧ್ಯಾಹ್ನದೊಳಗೆ ನಿರ್ಧರವಾಗುತ್ತೆ ಇಡೀ ದೇಶದ ಭವಷ್ಯ. ಮೋದಿ ಮತ್ತೆ ಪ್ರಧಾನಿ ಆಗ್ತಾರಾ.. ರಾಹುಲ್ ಹಾದಿ ಸುಗಮವಾಗುತ್ತಾ.. ಎಡರಂಗಗಳು ಮೇಲುಗೈ ಸಾಧಿಸುತ್ತಾ ಅನ್ನೋದರ ಕಂಪ್ಲೀಟ್ ಚಿತ್ರಣ ಹೊರಬೀಳಲಿದೆ. ರಾಜ್ಯದ ಮೈತ್ರಿ ಸರ್ಕಾರಕ್ಕೆ ಹೊಡೆತ ಬೀಳುತ್ತಾ.. ಕಮಲ ಅರಳುತ್ತಾ ಅನ್ನೋದು ತಿಳಿಯಲಿದೆ.

ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವದ ಫಲಿತಾಂಶವನ್ನ ನೋಡಲು ಇಡೀ ಜಗತ್ತು ಸಹ ಕಾತುರದಿಂದ ಕಾಯುತ್ತಿದೆ. ಈ ರಿಸಲ್ಟ್ ಬರೀ ಭಾರತ ಮಾತ್ರವಲ್ಲ ನಮ್ಮ ಶತ್ರು ಹಾಗೂ ಮಿತ್ರ ರಾಷ್ಟ್ರಗಳಲ್ಲಿಯೂ ಕುತೂಹಲ ಮೂಡಿಸಿದೆ. 542 ಕ್ಷೇತ್ರಗಳ ಸಂಪೂರ್ಣ ಫಲಿತಾಂಶಕ್ಕೆ ಆದಷ್ಟು ಬೇಗ ತೆರೆ ಬೀಳಲಿದೆ.


TAG


Leave a Reply

Your email address will not be published. Required fields are marked *

error: Content is protected !!