ಭಾರತ-ನ್ಯೂಜಿಲೆಂಡ್ ಏಕದಿನ ಟೂರ್ನಿ: ಮಳೆಯ ಕಾರ್ಮೋಡ

47

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟಿ-20 ವಿಶ್ವಕಪ್ ವಿಜಯೇತ ನ್ಯೂಜಿಲೆಂಡ್ ವಿರುದ್ಧ ಭಾರತ 3 ಪಂದ್ಯಗಳ ಟಿ-20 ಸರಣಿಯನ್ನು 1-0ನಿಂದ ಗೆಲುವು ಸಾಧಿಸಿತು. ಮಳೆಯ ಕಾಟಕ್ಕೆ ಟಿ-20 ಟೂರ್ನಿ ಕ್ರಿಕೆಟ್ ಪ್ರೇಮಿಗಳಿಗೆ ಕಿಕ್ ನೀಡಲಿಲ್ಲ. ಈಗ ಏಕದಿನ ಪಂದ್ಯಕ್ಕೂ ಮಳೆಯ ಕಾಟವಿದೆ.

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟಿ-20 ಸರಣಿ ಗೆದ್ದ ಭಾರತ, ಶಿಖರ್ ಧವನ್ ನಾಯಕತ್ವದಲ್ಲಿ ಏಕದಿನ ಟೂರ್ನಿ ಆಡುತ್ತಿದೆ. ಮೊದಲ ಪಂದ್ಯ ಶುಕ್ರವಾರ ಮುಂಜಾನೆ ನಡೆಯಲಿದೆ. ಆದರೆ, ಸದಾ ಮೋಡ ಮುಸುಕಿದ ವಾತಾವರಣವಿದ್ದು, ಪಂದ್ಯ ನಡೆಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಆಕ್ಲೆಂಡ್ ನಲ್ಲಿ ದಿನಪೂರ್ತಿ ಮೋಡಕವಿದ ವಾತಾವರಣವಿದೆ ಎಂದು ಹವಾಮಾನ ವರದಿಯಿದೆ. ಶೇಕಡ 62ರಷ್ಟು ತೇವಾಂಶ, ಶೇಕಡ 20ರಷ್ಟು ಮಳೆ ಸಾಧ್ಯತೆಯಿದೆ. ಗಂಟೆಗೆ 32 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆಯಂತೆ. ಪಂದ್ಯ ಮುಂಜಾನೆ 7ಗಂಟೆಗೆ ಶುರುವಾಗುವುದರಿಂದ ಶೀತ ಹಾಗೂ ಗಾಳಿಯ ನಡುವೆ ಆಟಗಾರರು ಆಡಬೇಕಾಗುತ್ತೆ. ಹೀಗಾಗಿ ಶುಕ್ರವಾರ ನಡೆಯುವ ಪಂದ್ಯ ಏನಾಗಲಿದೆ ಅನ್ನೋ ಕುತೂಹಲವಿದೆ.
Leave a Reply

Your email address will not be published. Required fields are marked *

error: Content is protected !!