ರೈಲು ದುರಂತ: ರಕ್ತದಾನಕ್ಕೆ ಮುಂದಾದ ಜನತೆ

156

ಪ್ರಜಾಸ್ತ್ರ ಸುದ್ದಿ

ಒಡಿಶಾ: ರೈಲು ದುರಂತದಲ್ಲಿ 280ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹೀಗಾಗಿ ಗಾಯಾಳುಗಳಿಗೆ ರಕ್ತದಾನ ಮಾಡಲು ಅಪಾರ ಸಂಖ್ಯೆಯಲ್ಲಿ ಜನರು ಕ್ಯೂ ನಿಂತಿದ್ದಾರೆ. ಈ ಮೂಲಕ ಮಾನವೀಯತೆ ಮೆರೆಯಲಾಗಿದೆ.

ಯಾವೆಲ್ಲ ಆಸ್ಪತ್ರೆಗಳಲ್ಲಿ ಗಾಯಾಳುಗಳನ್ನು ದಾಖಲಾಗಿದ್ದಾರೋ ಅಲ್ಲೆಲ್ಲ ರಕ್ತದಾನ ಮಾಡಲು ಜನರು ಸ್ವಯಂಪ್ರೇರಣೆಯಿಂದ ಸರತಿ ಸಾಲಿನಲ್ಲಿ ನಿಂತುಕೊಂಡಿದ್ದಾರೆ. ನಾವು ನೀಡುವ ಒಂದಿಷ್ಟು ರಕ್ತದಿಂದ ಜನರ ಉಳಿಸಬಹುದು. ಇದೊಂದು ಮಹತ್ವದ ಕೆಲಸವೆಂದು ರಕ್ತದಾನಿಗಳು ಹೇಳುತ್ತಿದ್ದಾರೆ.
Leave a Reply

Your email address will not be published. Required fields are marked *

error: Content is protected !!