ಅವಳಿ ಸಹೋದರಿಯರನ್ನು ಮದುವೆಯಾದ ಹುಡಗನಿಗೆ ಸಂಕಷ್ಟ

237

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನೆರೆಯ ಮಹಾರಾಷ್ಟ್ರದ ಸೋಲಾಪುರದಲ್ಲಿ ಕಳೆದ ಶುಕ್ರವಾರ ಅವಳಿ ಸಹೋದರಿಯನ್ನು ಒಬ್ಬನೆ ಹುಡುಗ ಮದುವೆಯಾಗಿರುವುದು ಸಾಕಷ್ಟು ವೈರಲ್ ಆಗಿದೆ. ಅವಳಿ ಸಹೋದರಿಯರು ಹುಡುಗನಿಗೆ ಹಾರ ಹಾಕುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೀಗ ವರನಿಗೆ ಸಂಕಷ್ಟ ಎದುರಾಗಿದೆ.

ಹೀಗೆ ಸಹೋದರಿಯರಿಬ್ಬರನ್ನು ಮದುವೆಯಾದ ಹುಡುಗನ ವಿರುದ್ಧ ಅಕಲೋಜ್ ಪೊಲೀಸ್ ಠಾಣೆಯಲ್ಲಿ ಅನಾಮದೇಯ ದೂರುವೊಂದು ದಾಖಲಾಗಿದೆ. ಇದೊಂದು ಅಸ್ವಾಭಾವಿಕ ಸಂಬಂಧವೆಂದು ಹೇಳಿ ಐಪಿಸಿ 494ರ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಕೆಲ ಮೂಲಗಳ ಪ್ರಕಾರ ಅವಳಿ ಸಹೋದರಿಯರಾದ ಪಿಂಕಿ ಹಾಗೂ ರಿಂಕಿ ಐಟಿ ಉದ್ಯೋಗಿಗಳಾಗಿದ್ದಾರೆ. ತಂದೆ ನಿಧನದ ಬಳಿಕ ಮಲ್ಶಿರಾಸ್ ಗೆ ಬಂದಿದ್ದಾರೆ. ತಾಯಿಗೂ ಅನಾರೋಗ್ಯ. ಮುಂಬೈ ಮೂಲದ ಟ್ರಾವಲ್ ಎಜೆನ್ಸಿ ಉದ್ಯಮಿ ಅತುಲ್ ಇವರ ಬಾಲ್ಯದ ಸ್ನೇಹಿತನಾಗಿದ್ದಾನಂತೆ. ಸಹೋದರಿಯರ ತಾಯಿಯ ಆರೋಗ್ಯದ ಬಗ್ಗೆಯೂ ಅತುಲ್ ಕಾಳಜಿ ವಹಿಸುತ್ತಿದ್ದಾನಂತೆ. ಮದುವೆ ನಂತರವೂ ಜೊತೆಯಾಗಿರಲು ನಿರ್ಧರಿಸಿದ ಸಹೋದರಿಯರು ಒಬ್ಬನನ್ನೇ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಹುಡುಗನ ವಿರುದ್ಧ ದೂರು ದಾಖಲಾಗಿದೆ. ಈ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.
Leave a Reply

Your email address will not be published. Required fields are marked *

error: Content is protected !!