ಸಾವಳಗಿಯಲ್ಲಿ ಅನಧಿಕೃತ ಅಂಗಡಿಗಳ ತೆರವು

455

ಪ್ರಜಾಸ್ತ್ರ ಸುದ್ದಿ

ಜಮಖಂಡಿ: ತಾಲೂಕಿನ ಸಾವಳಗಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿನ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಲಾಯ್ತು. ಸಾವಳಗಿಯಿಂದ ತುಂಗಳ ರಸ್ತೆಯ ಬದಿಗಳಲ್ಲಿ ಹಲವು ಅನಧಿಕೃತ ಅಂಗಡಿಗಳಿದ್ದು ಇದರ ತೆರವಿಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಒಂದು ತಿಂಗಳ ಹಿಂದೆ ಮಾನವೀಯತೆ ದೃಷ್ಟಿಯಿಂದ ತಿಳಿಹೇಳಿ ಅಂಗಡಿಗಲು ತೆರವು ನೀಡಲು ಸೂಚಿಸಿದರು. ಆದ್ರೆ, ಯಾರೂ ತೆಗೆಯದ ಕಾರಣ, ಇಂದು ತೆರವುಗೊಳಿಸಲಾಯ್ತು.

ಜೆಸಿಬಿ ಮೂಲಕ ಕಾರ್ಯಾಚರಣೆಗಿಳಿದ ಅಧಿಕಾರಿಗಳು ಹಾಗೂ ಅಂಗಡಿಕಾರರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಸರಿಪಡಿಸಿದ್ರು. ಈ ವೇಳೆ ಲೋಕಪಯೋಗಿ ಇಲಾಖೆಯ ಸಹಾಯಕ ಅಭಿಯಂತರರಾದ ಪಿ.ಎಚ್.ಗಾಯಕವಾಡ ಮಾತನಾಡಿ, ಸಾವಳಗಿ ಗ್ರಾಮದ ಅಭಿವೃದ್ದಿಗೋಸ್ಕರ ವಿಶೇಷವಾಗಿ 2 ಕೋಟಿ 50 ಲಕ್ಷ ಅನುದಾನ ಮಂಜೂರು ಮಾಡಿಸಿ, ಹಳೆ ಐ.ಬಿ ರಸ್ತೆ, ತೆಲಸಂಗ ರಸ್ತೆ ಹಾಗೂ ಅಥಣಿ ರಸ್ತೆಗೆ ಹೊಂದಿಕೊಂಡಂತೆ ಮೂರು ಭಾಗದಲ್ಲಿ ಅಂದಾಜು 70 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಯೋಜನೆಯನ್ನು ಹೊಂದಿದ್ದೆವೆ ಎಂದರು.

ಅಲ್ದೇ, ಈಗಿನ ರಸ್ತೆಯ ಮದ್ಯದಿಂದ ಎರಡು ಭಾಗದಲ್ಲಿ 10 ಮೀಟರ್ ರಸ್ತೆ ಅಗಲೀಕರಣ ಮಾಡಿ ರಸ್ತೆ ನಡುವೆ ವಿಭಜಕಗಳನ್ನು ನಿರ್ಮಿಸಿ, ಆಧುನಿಕ ವಿದ್ಯುತ್ ದ್ವೀಪಗಳನ್ನು ಅಳವಡಿಸಲಾಗುವದು. ಆದರಿಂದ ಗ್ರಾಮಸ್ಥರು ಸಹಕರಿಸಬೇಕೆಂದು ಹೇಳಿ, ಅನಧಿಕೃತ ಅಂಗಡಿಗಳನ್ನ ತೆರವುಗೊಳಿಸಿದ್ರು.




Leave a Reply

Your email address will not be published. Required fields are marked *

error: Content is protected !!