ಅನ್ ಲಾಕ್ 4.0: ಹಂಪಿಯತ್ತ ಪ್ರವಾಸಿಗರು

330

ಪ್ರಜಾಸ್ತ್ರ ಸುದ್ದಿ

ಬಳ್ಳಾರಿ: ಕರೋನಾ ಲಾಕ್ ಡೌನ್ ನಿಂದಾಗಿ ಪ್ರವಾಸಿ ತಾಣಗಳ ಪ್ರವೇಶ ನಿಷೇಧ ಹೇರಲಾಗಿತ್ತು. ಇದೀಗ ತೆರವುಗೊಳಿಸಿದ ಪರಿಣಾಮ, ವಿಶ್ವವಿಖ್ಯಾತ ಹಂಪಿಯತ್ತ ಪ್ರವಾಸಿಗರ ದಂಡು ಹರಿದು ಬರ್ತಿದೆ.

ಕಳೆದ ನಾಲ್ಕು ತಿಂಗಳಿನಿಂದ ಪ್ರವಾಸಿ ತಾಣಗಳು ಸಂಪೂರ್ಣ ಬಂದ್ ಆಗಿತ್ತು. ಇದೀಗ ತೆರವುಗೊಳಿಸಿದ ಪರಿಣಾಮ, ಟೂರಿಸ್ಟ್ ಗಳು ನಿಧಾನವಾಗಿ ಆಗಮಿಸ್ತಿದ್ದಾರೆ. ಅದರಲ್ಲೂ ಹಂಪಿ ತಾಣಗಳತ್ತ ಜನರು ಆಗಮಿಸ್ತಿದ್ದು, ಮರಳಿ ತನ್ನ ವೈಭವಕ್ಕೆ ಮರಳುತ್ತಿದೆ.

ಕೋವಿಡ್ 19 ಹಿನ್ನೆಲೆಯಲ್ಲಿ ತನ್ನ ಹೊಳಪು ಕಳೆದುಕೊಂಡಿದ್ದ ಪ್ರವಾಸಿ ತಾಣಗಳು ಇದೀಗ ಕಲರವದಿಂದ ಕೂಡುತ್ತಿದೆ. ಜನರು ಆಗಮಿಸ್ತಿದ್ದು, ಸುತ್ತಲಿನ ವ್ಯಾಪಾರ ವಹಿವಾಟು ಸಹ ಒಂದು ಹಂತಕ್ಕೆ ಬರ್ತಿದೆ. ಇಲ್ಲಿನ ಸಿಬ್ಬಂದಿ ಪ್ರವಾಸಿಗರಿಗೆ ಕರೋನಾ ಬಗ್ಗೆ ಜಾಗೃತಿ ಮೂಡಿಸ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!