ರಾಜ್ಯದ ಶೇ.80ರಷ್ಟು ಜನರಲ್ಲಿ ಸೋಂಕಿನ ಲಕ್ಷಣಗಳಿಲ್ಲ: ಸಿಎಂ

283

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇಂದು ಸಂಜೆಯಿಂದ ಸಿಲಿಕಾನ್ ಸಿಟಿಯ ಲಾಕ್ ಡೌನ್ ಮುಗಿಯುತ್ತಿದೆ. ಹೀಗಾಗಿ ಮತ್ತೆ ವಿಸ್ತರಣೆಯ ಮಾತುಗಳು ಕೇಳಿ ಬಂದಿದ್ವು. ಇದಕ್ಕೆ ತೆರೆ ಎಳೆದಿರುವ ಸಿಎಂ ಬಿ.ಎಸ್ ಯಡಿಯೂರಪ್ಪನವರು, ನಾಳೆಯಿಂದ ರಾಜ್ಯದಲ್ಲಿ ಎಲ್ಲಿಯೂ ಲಾಕ್ ಡೌನ್ ಇರುವುದಿಲ್ಲವೆಂದು ಘೋಷಿಸಿದ್ದಾರೆ.

ನಗರದಲ್ಲಿ ಆರ್ಥಿಕವಾಗಿ ಚೇತರಿಸಿಕೊಳ್ಳುವ ಕೆಲಸಗಳು ಆಗಬೇಕು. ಕರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನ ಮರೆಯಬೇಡಿ ಎಂದು ಹೇಳಿದ್ದಾರೆ. ಈ ಮೂಲಕ ಕರೋನಾ ನಿಯಂತ್ರಣಲ್ಲಿ ಕೈ ಜೋಡಿಸಿ ಎಂದು ಕೇಳಿಕೊಂಡಿದ್ದಾರೆ.

ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದ ಸಿಎಂ, ಲಾಕ್ ಡೌನ್ ಒಂದೇ ಪರಿಹಾರವಲ್ಲ. ಕರೋನಾ ವಾರಿಯರ್ಸ್ ನಿರಂತರ ಕೆಲಸ ಮಾಡ್ತಿದ್ದು, ಜನರು ಮಾರ್ಗಸೂಚಿಗಳನ್ನ ಅನುಸರಿಸಬೇಕು ಎಂದರು. ತಜ್ಞರು 5 ಸಲಹೆಗಳನ್ನ ನೀಡಿದ್ದಾರೆ. ಟ್ರೇಸ್, ಟ್ರಾಕ್, ಟೆಸ್, ಟ್ರೀಟ್ ಹಾಗೂ ಟೆಕ್ನಾಲಜಿ ಬಳಿಸಿಕೊಂಡ್ರೆ ಕೋವಿಡ್ 19 ನಿಯಂತ್ರ ಸಾಧ್ಯವೆಂದಿದ್ದಾರೆ. ರಾಜ್ಯದಲ್ಲಿ ಶೇಕಡ 80ರಷ್ಟು ಜನರಿಗೆ ಸೋಂಕಿನ ಲಕ್ಷಣಗಳು ಇಲ್ಲ. ಹೀಗಾಗಿ ಕ್ವಾರಂಟೈನ್ ನಲ್ಲಿರದೆ ಮನೆಯಲ್ಲಿರಬೇಕು. ಬೆಂಗಳೂರಿನಲ್ಲಿ 11,230 ಹಾಸಿಗೆಗಳನ್ನ ಕೋವಿಡ್ ಚಿಕಿತ್ಸೆಗೆ ಮೀಸಲು ಇಡಲಾಗಿದೆ ಎಂದಿದ್ದಾರೆ.

100ಕ್ಕೆ 98 ಜನ ಗುಣಮುಖರಾಗ್ತಿದ್ದು, ಯಾರು ಆತ್ಮಹತ್ಯೆಗೆ ಯತ್ನಿಸಬಾರದು. ಹೊರ ರಾಜ್ಯಗಳಿಂದ ಬಂದವರಿಂದ ಸೋಂಕು ಹೆಚ್ಚುತ್ತಿದೆ. ಜನರಲ್ಲಿ ಕೈ ಮುಗಿದು ಕೇಳುತ್ತೇನೆ. ಮಾರ್ಗಸೂಚಿಗಳನ್ನ ಅನುಸರಿಸಿ. ಎಲ್ಲರೂ ಸಹಕರಿಸಬೇಕು ಎಂದರು. ಸೋಂಕಿನ ನಡುವೆ 8.6 ಲಕ್ಷ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಆಂಬ್ಯುಲೆನ್ಸ್ ಸಮಸ್ಯೆಯಿಲ್ಲ. ಎಲ್ಲ ರೀತಿಯ ವ್ಯವಸ್ಥೆ ಮಾಡ್ತಿದ್ದೇವೆ. ರಾಜ್ಯದಲ್ಲಿ ಆರ್ಥಿಕತೆ ಚೇತರಿಸಬೇಕಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವುದಿಲ್ಲವೆಂದು ಸಿಎಂ ಬಿ.ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!