ಯುಪಿಎಸ್ಸಿ, ಕೆಪಿಎಸ್ಸಿ ಪರೀಕ್ಷಾರ್ಥಿಗಳಿಗೆ ಗುಡ್ ನ್ಯೂಸ್

371

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿರುವ ಪರೀಕ್ಷಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಈ ಎರಡೂ ಪರೀಕ್ಷೆಗಳು ಏಕ ಕಾಲದಲ್ಲಿ ನಿಗದಿಯಾಗಿದ್ವು. ಇದ್ರಿಂದ ಸಾಕಷ್ಟು ಗೊಂದಲಿದ್ದವರಿಗೆ ಶುಭ ಸುದ್ದಿ ನೀಡಲಾಗಿದೆ.

ಹೌದು, ಕೆಪಿಎಸ್ಸಿ ಪರೀಕ್ಷೆಯನ್ನ ನಿಗದಿ ಮಾಡಿದ ದಿನಾಂಕದಿಂದ 1 ತಿಂಗಳ ಕಾಲ ಮುಂದೂಡಲಾಗಿದೆ. ಈ ಮೂಲಕ ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಎರಡೂ ಪರೀಕ್ಷೆಗಳನ್ನ ಬರೆಯಲು ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ಸಮಯಾವಕಾಶ ನೀಡಲಾಗಿದೆ.

ಯುಪಿಎಸ್ಸಿ ಪರೀಕ್ಷೆ ಜನವರಿ 8ರಿಂದ 10 ಹಾಗೂ 16, 17, 2021ರಂದು ನಡೆಯಲಿವೆ. ಕೆಪಿಎಸ್ಸಿ ಪರೀಕ್ಷೆ ಡಿಸೆಂಬರ್ 21-24 ಹಾಗೂ ಜನವರಿ 2-5ರ ವರೆಗೆ ನಿಗದಿಯಾಗಿತ್ತು. ಹೀಗಾಗಿ ಎರಡೂ ಪರೀಕ್ಷೆ ತೆಗೆದುಕೊಂಡವರಿಗೆ ತೊಂದರೆಯಾಗ್ತಿದ್ದ ಕಾರಣ, ಒಂದು ತಿಂಗಳು ಮುಂದೂಡಬೇಕೆಂದು ಕೇಳಿಕೊಂಡಿದ್ರು. ಅದರಂತೆ ಇದೀಗ ಒಂದು ತಿಂಗಳ ಕಾಲ ಮುಂದೂಡಲಾಗಿದೆ.




Leave a Reply

Your email address will not be published. Required fields are marked *

error: Content is protected !!