ವೈಷ್ಣವಿ ಜೊತೆ ಇನ್ನು ನಿಶ್ಚಿತಾರ್ಥ ಆಗಿಲ್ಲ: ನಟ ವಿದ್ಯಾಭರಣ್

165

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕಿರುತರೆ ನಟಿ ವೈಷ್ಣವಿ ಹಾಗೂ ನಟ ವಿದ್ಯಾಭರಣ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಜೊತೆಗೆ ಫೋಟೋ ಸಹ ಹಂಚಿಕೊಳ್ಳಲಾಗಿತ್ತು. ಆದರೆ, ಇದನ್ನು ನಿರಾಕರಿಸಿರುವ ನಟ ವಿದ್ಯಾಭರಣ್, ನಟಿ ವೈಷ್ಣವಿಗೌಡ ಕುಟುಂಬದ ಜೊತೆ ಬರೀ ಮಾತುಕತೆಯಾಗಿದೆ. ನಿಶ್ಚಿತಾರ್ಥ ಆಗಿಲ್ಲ. ಈ ಫೋಟೋ ಎಲ್ಲಿಂದ ವೈರಲ್ ಆಯಿತು ಗೊತ್ತಿಲ್ಲ ಎಂದಿದ್ದಾರೆ.

ನಮ್ಮ ಕುಟುಂಬದ ಹೆಸರು ಹಾಳು ಮಾಡಲು ಹೋಗಿ ಮಾಡಿದ್ದಾರೆ. ನನಗೆ ಈ ಹಿಂದೆ ಗರ್ಲ್ ಫ್ರೆಂಡ್ ಇದಿದ್ದು ನಿಜ. ಅದು ನನ್ನ ಸ್ನೇಹಿತರಿಗೂ ಗೊತ್ತು. ಅವರು ಇಷ್ಟು ಕೀಳುಮಟ್ಟಕ್ಕೆ ಇಳಿಯಲ್ಲ. ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತೇನೆ ಅಂತಾ ಹೇಳಿದ್ದಾರೆ.

ಇನ್ನು ಮಾಧ್ಯಮದ ಮೂಲ ವೈಷ್ಣವಿಗೆ ಹೇಳಲು ಇಚ್ಚೆ ಪಡ್ತೀನಿ, ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. ನಾವು ಮುಂದೆ ಮದುವೆ ಆಗ್ತೀವೋ ಇಲ್ಲವೋ ಗೊತ್ತಿಲ್ಲ. ಕಾಣದ ಹಿತ ಶತ್ರುಗಳು ಈ ರೀತಿ ಮಾಡಿದ್ದಾರೆ. ಇದರಿಂದ ಹೊರ ಬರ್ತಿನಿ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!