ನಟ ವಸಿಷ್ಠ ಸಿಂಹ, ನಟಿ ಹರಿಪ್ರಿಯಾ ಮದುವೆ?

154

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ, ನಟಿಯರ ಬಗ್ಗೆ ಅವರ ಅಭಿಮಾನಿಗಳಿಗೆ, ಸಾರ್ವಜನಿಕರಿಗೆ ಸಾಕಷ್ಟು ಕುತೂಹಲ ಇರುತ್ತೆ. ಅದರಲ್ಲೂ ಅವರ ಪ್ರೀತಿ, ಡೇಟಿಂಗ್, ಮದುವೆ ವಿಚಾರ ಬಂದಾಗ ಮತ್ತಷ್ಟು ಕುತೂಹಲ ಮೂಡಿರುತ್ತೆ. ಇನ್ನು ನಟ, ನಟಿಯರು ಮದುವೆಯಾಗುವುದು ಹೊಸದೇನೂ ಅಲ್ಲ.

ಇದೀಗ ಸ್ಯಾಂಡಲ್ ವುಡ್ ಅಂಗಳದಲ್ಲಿ ಮತ್ತೊಂದು ಸ್ಟಾರ್ ಜೋಡಿ ಮದುವೆಯಾಗುತ್ತೆ ಎನ್ನಲಾಗುತ್ತಿದೆ. ಬೇಸ್ ವೈಸ್ ಹಾಗೂ ತಮ್ಮದೆ ವಿಶಿಷ್ಟ ನಟನೆಯ ಮೂಲಕ ಗಮನ ಸೆಳೆದವರು ವಸಿಷ್ಠ ಸಿಂಹ. ಕನ್ನಡ ಸೇರಿ ಸೌಥ್ ಸಿನಿ ದುನಿಯಾದಲ್ಲಿ ಮಿಂಚುತ್ತಿರುವವರು ದಾವಣಗೆರೆಯ ನಟಿ ಹರಿಪ್ರಿಯಾ. ಇವರಿಬ್ಬರ ನಡುವೆ ಲವ್ವಿಡವ್ವಿ ಇದ್ದು, ಮದುವೆಗೆ ಸಿದ್ಧತೆ ನಡೆಸಿದ್ದಾರೆ ಅನ್ನೋ ಗುಸುಗುಸು ಶುರುವಾಗಿದೆ.

ಇತ್ತೀಚೆಗೆ ನಟಿ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿರುವ ವಿಡಿಯೋ ಹಂಚಿಕೊಂಡಿದ್ದರು. ನಟಿ ಜೊತೆಗೆ ನಟ ವಿಸಿಷ್ಠ ಸಿಂಹ ಸಹ ಇದ್ದರು, ಅವರ ಧ್ವನಿ ಕೇಳಿದೆ ಎನ್ನಲಾಯಿತು. ಅಲ್ಲದೆ ಬೆಂಗಳೂರು ಏರ್ ಪೋರ್ಟ್ ನಲ್ಲಿ ಒಟ್ಟಿಗೆ ಕೈ ಕೈ ಹಿಡಿದುಕೊಂಡು ಹೆಜ್ಜೆ ಹಾಕಿರುವ ಫೋಟೋ ಸಹ ವೈರಲ್ ಆಗಿದೆ. ಹೀಗಾಗಿ ಶೀಘ್ರದಲ್ಲಿ ಇವರು ಮದುವೆಯಾಗುತ್ತಾರೆ ಅನ್ನೋ ಟಾಕ್ ಇದ್ದು, ಎಲ್ಲದಕ್ಕೂ ಅವರೆ ಉತ್ತರಿಸಬೇಕಿದೆ.




Leave a Reply

Your email address will not be published. Required fields are marked *

error: Content is protected !!