ನಾಳೆ ವೇದ ಟೀಸರ್ ರಿಲೀಸ್

225

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಶಿವಣ್ಣ ನಟನೆಯ ವೇದ ಚಿತ್ರ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ. ಚಿತ್ರ ತಂಡ ಒಂದೊಂದೇ ಪೋಸ್ಟರ್ ರಿಲೀಸ್ ಮಾಡಿತು. ನಂತರ ಗಿಲ್ಲಕೋ ಶಿವ ಅನ್ನೋ ಲಿರಿಕಲ್ ಹಾಡು ರಿಲೀಸ್ ಮಾಡಿತು. ಈಗ ಟೀಸರ್ ರಿಲೀಸ್ ಗೆ ರೆಡಿಯಾಗಿದೆ.

ಡಿಸೆಂಬರ್ 3, ಶನಿವಾರ ರಾಯಚೂರಿನಲ್ಲಿ ಟೀಸರ್ ರಿಲೀಸ್ ಮಾಡುತ್ತಿದೆ. ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸಂಜೆ 5 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಈ ಮೂಲಕ ಭರ್ಜರಿ ಪ್ರಚಾರ ನಡೆಸಲಾಗುತ್ತಿದೆ. ಡಿಸೆಂಬರ್ 23ಕ್ಕೆ ಚಿತ್ರ ರಿಲೀಸ್ ಆಗುತ್ತಿದ್ದು, ಅದಕ್ಕೂ ಮೊದಲು ಹಂತ ಹಂತವಾಗಿ ಪ್ರಚಾರ ನಡೆಸಲಾಗುತ್ತಿದೆ.

ಮಂಡ್ಯದಲ್ಲಿ ಮೊದಲ ಲಿರಿಕಲ್ ಹಾಡು ರಿಲೀಸ್ ಆಯಿತು. ಈಗ ಟೀಸರ್ ಸಮಯ. ಎ.ಹರ್ಷ ನಿರ್ದೇಶನದ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಭಜರಂಗಿ, ವಜ್ರಕಾಯ, ಭಜರಂಗಿ-2 ನಂತರ ಶಿವಣ್ಣ ಹಾಗೂ ಎ.ಹರ್ಷ ಕಾಂಬಿನೇಷನ್ ನಲ್ಲಿ ವೇದ ರಿಲೀಸ್ ಆಗುತ್ತಿದೆ.




Leave a Reply

Your email address will not be published. Required fields are marked *

error: Content is protected !!