ಹಜಾರೆ ಟ್ರೋಫಿ ಹಣಾಹಣಿ: ಕರ್ನಾಟಕಕ್ಕೆ 253 ಟಾರ್ಗೆಟ್

355

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ ಹಜಾರೆ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ತಂಡಗಳ ನಡುವೆ ಫೈಟ್ ನಡೆಯುತ್ತಿದೆ. ಮೊದಲು ಬ್ಯಾಟ್ ಮಾಡಿದ ತಮಿಳುನಾಡು 253 ಟಾರ್ಗೆಟ್ ನೀಡಿದೆ.

Tamil Nadu players during the Vijay Hazare Trophy match against Madhya Pradesh at SMS Stadium in Jaipur,Rajasthan,India , Oct 12,2019. (Photo by Vishal Bhatnagar/NurPhoto via Getty Images)

ಶುರುವಿನಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಅಭಿನವ ಮುಕುಂದ ಹಾಗೂ ಬಾಬಾ ಅಪರಜಿತ ಆಸರೆಯಾದ್ರು. ಈ ಜೋಡಿ 124 ರನ್ ಗಳ ಕಾಣಿಕೆ ನೀಡಿತು. 88 ರನ್ ಗಳಿಸಿದ್ದ ಮುಕುಂದ, ಪ್ರತೀಕ ಜೈನ್ ಬೌಲಿಂಗ್ ನಲ್ಲಿ ಔಟ್ ಆಗುವ ಮೂಲಕ ಈ ಜೋಡಿ ಆಟಕ್ಕೆ ಬ್ರೇಕ್ ಬಿತ್ತು. ಇದರ ಹಿಂದೆಯೇ 66 ರನ್ ಹೊಡೆದು ಆಡ್ತಿದ್ದ ಅಪರಜಿತ ರನ್ ಔಟ್ ಆದ್ರು. ಮುಂದೆ ಬಂದ ಆಟಗಾರರು ಹೀಗೆ ಬಂದು ಹಾಗೇ ಹೋದ್ರು. ಹೀಗಾಗಿ 253 ರನ್ ಗಳಿಗೆ ಆಲೌಟ್ ಆದ್ರು.

ವಿಜಯ ಶಂಕರ 38, ಶಾರುಖ ಖಾನ 27 ರನ್ ಗಳಿಸಿದ್ರು. ಕ್ಯಾಪ್ಟನ್ ದಿನೇಶ ಕಾರ್ತಿಕ 11 ರನ್ ಗೆ ಔಟ್ ಆದ್ರು. ಕರ್ನಾಟಕ ಪರ ಅಭಿಮನ್ಯು ಮಿಥುನ, ಕೊನೆ ಓವರ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಒಟ್ಟು 5 ವಿಕೆಟ್ ಪಡೆದು ಮಿಂಚಿದ್ರು. ವಿ.ಕೌಶಿಕ 2, ಪ್ರತೀಕ ಜೈನ್ ಹಾಗೂ ಕೃಷ್ಣಪ್ಪ ಗೌತಮ ತಲಾ 1 ವಿಕೆಟ್ ಪಡೆದ್ರು.




Leave a Reply

Your email address will not be published. Required fields are marked *

error: Content is protected !!