ವಿಜಯಪುರದ ಜೆಡಿಎಸ್ ಅಭ್ಯರ್ಥಿಗಳು ಇವರು…

351

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಸೋಮವಾರ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರು 89 ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ್ದಾರೆ. ಇದರಲ್ಲಿ ಗುಮ್ಮಟನಗರಿಯ 8 ಕ್ಷೇತ್ರಗಳಲ್ಲಿ 7ರಲ್ಲಿ ಮಾತ್ರ ಅಭ್ಯರ್ಥಿಗಳ ಘೋಷಣೆಯಾಗಿದೆ.

ವಿಜಯಪುರ ನಗರ ಬಿಟ್ಟು ಉಳಿದ 7 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ. ಮುದ್ದೇಬಿಹಾಳ-ಡಾ.ಚನ್ನಬಸಪ್ಪ ಸಂಗಪ್ಪ ಸೊಲ್ಲಾಪುರ, ದೇವರಹಿಪ್ಪರಗಿ-ರಾಜುಗೌಡ ಪಾಟೀಲ, ಬಸವನಬಾಗೇವಾಡಿ-ಪರಮಾನಂದ ಬಸಪ್ಪ ತನಿಖೆದಾರ, ಬಬಲೇಶ್ವರ-ಬಸವರಾಜ ಹೊನವಾಡ, ನಾಗಠಾಣ(ಎಸ್ಸಿ ಮೀಸಲು ಕ್ಷೇತ್ರ) ಪ್ರಸ್ತುತ ಶಾಸಕ ದೇವನಾಂದ ಪಿ.ಚವ್ಹಾಣ, ಇಂಡಿ-ಬಿ.ಡಿ ಪಾಟೀಲ, ಸಿಂದಗಿ-ಶಿವಾನಂದ ಪಾಟೀಲ ಅವರ ಹೆಸರನ್ನು ಘೋಷಿಸಲಾಗಿದೆ. ವಿಜಯಪುರ ನಗರದ ಅಭ್ಯರ್ಥಿ ಯಾರು ಅನ್ನೋ ಕುತೂಹಲವಿದೆ.




Leave a Reply

Your email address will not be published. Required fields are marked *

error: Content is protected !!